ಅರ್ಮೇನಿಯಾ ಹಾಗೂ ಅಜೆರ್ಬೈಜಾನ್ ನಡುವಿನ ಮಿಲಿಟರಿ ಸಂಘರ್ಷದಿಂದಾಗಿ ಅನೇಕರು ಸಾವನ್ನಪ್ಪಿದ್ದರೆ, ನಾಗೋರ್ನೋ ಹಾಗೂ ಖರ್ಬಾ ಪ್ರದೇಶದ ಸಾವಿರಾರು ಜನರು ಸಪ್ಟೆಂಬರ್ ತಿಂಗಳಿನಿಂದ ನಿರಾಶ್ರಿತರಾಗಿದ್ದಾರೆ.
ಗಡಿ ಪ್ರದೇಶದಲ್ಲಿ ನಿರಾಶ್ರಿತರಾಗಿರೋ ಜನತೆಗೆ ಸಹಾಯ ಮಾಡಲು ಉಭಯ ರಾಷ್ಟ್ರಗಳ ಪ್ರಜೆಗಳು ಮುಂದಾಗಿದ್ದಾರೆ. ಈ ಸಾಲಿನಲ್ಲಿ ಭಾರತೀಯ ಕುಟುಂಬವೂ ಸೇರಿದೆ ಅನ್ನೋದು ವಿಶೇಷ. ಗಡಿಯಲ್ಲಿನ ಜನರ ಕಷ್ಟ ಆಲಿಸಿದ ಅರ್ಮೇನಿಯಾದ ಭಾರತೀಯ ಮೂಲದ ಕುಟುಂಬ ಸಹಾಯಹಸ್ತ ಚಾಚೋ ಮೂಲಕ ಮಾನವೀಯತೆ ಮೆರೆದಿದೆ.
ತಮ್ಮ ರೆಸ್ಟೋರೆಂಟ್ನ್ನ ನಿರಾಶ್ರಿತರಿಗೆ ಉಚಿತ ಭೋಜನ ಕೇಂದ್ರವನ್ನಾಗಿ ಮಾರ್ಪಡಿಸಿದೆ ಭಾರತೀಯ ಮೂಲದ ಕುಟುಂಬ. ಮೂಲತಃ ಪಂಜಾಬ್ನವರಾದ 47 ವರ್ಷದ ಪರ್ವೇಜ್ ಅಲಿ ಖಾನ್ ಕಳೆದ 6 ವರ್ಷಗಳಿಂದ ಅರ್ಮೇನಿಯಾದಲ್ಲಿ ‘ಇಂಡಿಯನ್ ಮೆಹಕ್ ರೆಸ್ಟೋರೆಂಟ್ & ಬಾರ್’ನ್ನ ನಡೆಸಿಕೊಂಡು ಬರ್ತಿದ್ದಾರೆ. ಆದ್ರೀಗ ದೇಶದ ಗಡಿಭಾಗದಲ್ಲಿ ನಿರಾಶ್ರಿತರು ಅನುಭವಿಸ್ತಾ ಇರೋ ಕಷ್ಟವನ್ನ ಆಲಿಸಿದ ಖಾನ್ ಕುಟುಂಬ ಈ ನಿರ್ಧಾರ ಕೈಗೊಂಡಿದೆ. ಈಗಾಗಲೇ ನಿರಾಶ್ರಿತರಿಗೆ ಬಟ್ಟೆಗಳನ್ನ ಒದಗಿಸಿರೋ ಪರ್ವೇಜ್ ಅಲಿ ಇದೀಗ ತಮ್ಮ ರೆಸ್ಟೋರೆಂಟ್ನ್ನೂ ನಿರಾಶ್ರಿತರಿಗೆ ಬಿಟ್ಟುಕೊಟ್ಟಿದ್ದಾರೆ.
https://www.facebook.com/indianmehak/posts/2801760320059232
https://www.facebook.com/watch/?v=2803350216566909&t=0