alex Certify ಕೊರೊನಾ ಇದೆ, ಹತ್ತಿರ ಬರಬೇಡಿ……ಶುರುವಾಗುತ್ತಂತೆ ಹೀಗೊಂದು ಹೊಸ ಡ್ರಾಮಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಇದೆ, ಹತ್ತಿರ ಬರಬೇಡಿ……ಶುರುವಾಗುತ್ತಂತೆ ಹೀಗೊಂದು ಹೊಸ ಡ್ರಾಮಾ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ನಿರೂಪಕಿ ಅನುಶ್ರೀ ಬಂಧನವಾಗದಂತೆ ಶುಗರ್ ಡ್ಯಾಡಿ ತಡೆದಿದ್ದಾರೆ ಎಂದು ಆರೋಪಿಸಿದ್ದ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಇದೀಗ ಮತ್ತೊಂದು ಬಾಂಬ್ ಸಿಡಿಸಿದ್ದು, ಕೊರೊನಾ ಇದೆ ಹತ್ತಿರ ಬರಬೇಡಿ ಎಂದು ಇಂದು ಹೊಸ ಡ್ರಾಮಾ ಶುರುವಾಗಲಿದೆ ಎಂದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಂಬರಗಿ, ಪೊಲೀಸರು ತನ್ನನ್ನು ಬಂಧಿಸುತ್ತಾರೆ ಎಂದು ಗೊತ್ತಾದ ತಕ್ಷಣ ಇಂದು ನಾಟಕ ರಾಣಿಯ ಹೊಸ ಅವತಾರ ಶುರುವಾಗಲಿದೆ. ಕೊರೊನಾ ಇದೆ, ಹತ್ತಿರ ಬರಬೇಡಿ…..ಎಂದು ಹೊಸ ಡ್ರಾಮಾ ಪ್ರದರ್ಶನ ಮಾಡಲಿದ್ದಾರೆ ಎಂದು ಒಗಟಾಗಿ ಹೇಳಿದ್ದಾರೆ.

ಇನ್ನು ತಮ್ಮ ಒಗಟಾದ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿರುವ ಸಂಬರಗಿ, ನನ್ನ ಒಗಟು ನಿಜವಾಗಿರುತ್ತೆ. ಜನರು ತಮ್ಮ ಬುದ್ಧಿಯನ್ನು ಉಪಯೋಗಿಸಲಿ ಎಂದು ಒಗಟಿನ ರೀತಿ ಟ್ವೀಟ್ ಮಾಡಿರುತ್ತೇನೆ. ಅದೇನೇ ನಾಟಕವಾಡಿದರೂ ಅರೆಸ್ಟ್ ಆಗುತ್ತಾರೆ. ಅರೆಸ್ಟ್ ಆಗಿ ಚಿತ್ರರಂಗದಲ್ಲಿನ ಕೊಳಕಿನ ಬಗ್ಗೆ ಇನ್ನಷ್ಟು ಮಾಹಿತಿಗಳು ಹೊರಬರಬೇಕಿದೆ. ಇನ್ನು 48 ಗಂಟೆಗಳ ಒಳಗಾಗಿ ನಟಿಯೊಬ್ಬರು ಬಂಧನವಾಗುತ್ತಾರೆ. ಇದು ನನಗೆ ಪೊಲೀಸರೋ ಅಥವಾ ಇನ್ನಾರೋ ಕೊಟ್ಟಿರುವ ಮಾಹಿತಿಯಲ್ಲ. ಕಾಮನ್ ಸೆನ್ಸ್ ಪ್ರಕಾರ ನಾನು ಹೇಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...