ಹಾರುವ ಅಪರಿಚಿತ ವಸ್ತುಗಳು (UFO) ಆಗಾಗ ಕಾಣುತ್ತವೆ ಎಂಬ ಸುದ್ದಿಗಳು ಅನೇಕರಲ್ಲಿ ಬಹಳಷ್ಟು ಪ್ರಶ್ನೆಗಳನ್ನು ಮುಡಿಸುತ್ತಲೇ ಇರುತ್ತವೆ. UFOಗಳ ಸುತ್ತಲೂ ಹರಿದಾಡುವ ಅಂತೆ-ಕಂತೆಗಳು ಬಹಳ ಸಮಯದಿಂದಲೂ ಸಾರ್ವಜನಿಕ ಚರ್ಚೆಯ ವಿಷಯಗಳಾಗಿಬಿಟ್ಟಿವೆ.
ಈ ವಿಚಾರವಾಗಿ ಸ್ವಲ್ಪ ಆಳವಾಗಿ ಕೆದಕಿ ನೋಡಲು ಮುಂದಾಗಿರುವ ಜಪಾನ್ ಸರ್ಕಾರವು, ತನ್ನ ವೈಮಾನಿಕ ನೆತ್ತರಿನ ಮೇಲೆ ಇರಬಹುದಾದ UFOಗಳ ಬಗ್ಗೆ ಕಣ್ಣಿಡಲು ತಿಳಿಸಿದೆ. ಜಪಾನ್ನ ರಕ್ಷಣಾ ಸಚಿವ ತಾರೋ ಕೊನೋ ತಮ್ಮ ದೇಶದ ಸಶಸ್ತ್ರ ಪಡೆಗಳಿಗೆ ಈ ವಿಚಾರವಾಗಿ ಇನ್ನಷ್ಟು ಅಧ್ಯಯನ ನಡೆಸಲು ತಿಳಿಸಿದ್ದಾರೆ.
ಈ UFOಗಳು ಇರುವುದು ಸತ್ಯವಾಗಿದೆ ಎಂದಿರುವ ಅಮೆರಿಕ ಸರ್ಕಾರವು ತನ್ನ ನೌಕಾಪಡೆ ಸೆರೆ ಹಿಡಿದಿರುವ ಇದೇ ವಸ್ತುಗಳ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಇದೇ ಸಂಬಂಧ ಮೂರು ವಿಡಿಯೋಗಳನ್ನು ಪೆಂಟಗನ್ ಬಿಡುಗಡೆ ಮಾಡಿದೆ.