ನಿನ್ನೆ ಶಾರ್ಜಾದಲ್ಲಿ ನಡೆದ ಐಪಿಎಲ್ ನ 9 ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ರಾಹುಲ್ ತಿವಾಟಿಯಾ ಆರಂಭದಲ್ಲಿ ಬ್ಯಾಟಿಂಗ್ ಗಿಳಿದಾಗ 19 ಎಸೆತಗಳಲ್ಲಿ ಕೇವಲ 8 ರನ್ ಗಳಿಸಿದ್ದರು. ಇದರಿಂದ ತಂಡ ಪಂದ್ಯ ಸೋಲುತ್ತಾದೆಯೇನೋ ಎಂಬ ಗೊಂದಲ ಎಲ್ಲರಲ್ಲೂ ಇತ್ತು. ಆದರೆ ಕೊನೆ 3 ಓವರ್ ನಲ್ಲಿ ಇವರ ಆಟಕ್ಕೆ ಎಲ್ಲರೂ ನಿಬ್ಬೆರಗಾದರು.
ಕೋಟ್ರೆಲ್ ಅವರ ಓವರ್ ನಲ್ಲಿ 5 ಸಿಕ್ಸ್ ಸಿಡಿಸುವ ಮೂಲಕ ರಾಹುಲ್ ತಿವಾಟಿಯಾ ತಂಡದ ದಿಕ್ಕನ್ನೆ ಬದಲಿಸಿದರು. ಪಂಜಾಬ್ ನೀಡಿದ್ದ 224 ರನ್ ಗಳ ಗುರಿ ತಲುಪಲು ಸಹಾಯಕರಾದರು ರಾಹುಲ್ ತಿವಾಟಿಯಾ. 31 ಎಸೆತಗಳಲ್ಲಿ 53 ರನ್ ಗಳಿಸಿದ ಅವರು ಆ ಒಂದು ಓವರ್ ನಲ್ಲಿ ಸಿಡಿಸಿದ 5 ಸಿಕ್ಸರ್ ಗಳ ವಿಡಿಯೋ ವೈರಲ್ ಆಗಿದೆ.
https://twitter.com/Cricket58398017/status/1310416752744869894?ref_src=twsrc%5Etfw%7Ctwcamp%5Etweetembed%7Ctwterm%5E1310416752744869894%7Ctwgr%5Eshare_3&ref_url=https%3A%2F%2Fm.dailyhunt.in%2Fnews%2Findia%2Fkannada%2Fnews1820kannada-epaper-nwseika%2Frahul20tewatia20666660620tivaatiya20emba20hosa20staar20huttu20adbhuta20aatakke20hale20dveshave20kaarana-newsid-n218026544%3Fs%3Dauu%3D0x8ad0f259bd677651ss%3Dwsp