ಇನ್ನು ಅಂಬೆಗಾಲಿಡುವ ಆರು ತಿಂಗಳ ಬಾಲಕನೊಬ್ಬ ವೇಕ್ ಬೋರ್ಡಿಂಗ್ ಮಾಡುವ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾನೆ.
ಪಶ್ಚಿಮ ಅಮೆರಿಕಾದ ಉತಾಹ್ ನಲ್ಲಿರುವ ಸರೋವರದಲ್ಲಿ ನಡೆದ ಈ ಸಾಹಸದ ವಿಡಿಯೋವನ್ನು ಮಗುವಿನ ಪೋಷಕರೇ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಮಿಂಡಿ ಮತ್ತು ಕ್ಯಾಸ್ಸಿ ಹಂಫ್ರೀಸ್ ಅವರು ಮಗುವಿನ ಇನ್ ಸ್ಟಾ ಖಾತೆಯನ್ನು ನಿರ್ವಹಿಸುತ್ತಿದ್ದು, ಅವರೇ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಸರೋವರದಲ್ಲಿ ಯಾಂತ್ರಿಕ ದೋಣಿಗೆ ಕಟ್ಟಲಾದ ವೇಕ್ ಬೋರ್ಡ್ನಲ್ಲಿ ನಿಂತ ಮಗು ಅಂಜದೆ ಅಳುಕದೆ ಸಾಹಸ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಸಾವಿರಾರು ಮಂದಿ ವಿಡಿಯೋ ವೀಕ್ಷಿಸಿದ್ದು ಹುಬ್ಬೇರಿಸಿದ್ದಾರೆ. ಕೆಲವರು ಮಗುವಿನ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
https://www.instagram.com/p/CFDy1cZpnCA/?utm_source=ig_embed