alex Certify ಕೊರೊನಾ ಮಧ್ಯೆಯೂ ಹ್ಯಾಲೋವಿನ್ ಆಚರಣೆಗೆ ನಡೆದಿದೆ ಈ ಸಿದ್ದತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಮಧ್ಯೆಯೂ ಹ್ಯಾಲೋವಿನ್ ಆಚರಣೆಗೆ ನಡೆದಿದೆ ಈ ಸಿದ್ದತೆ

ಹ್ಯಾಲೋವಿನ್ ಹಬ್ಬದ ವಿಶೇಷವೆಂದರೆ ರಂಗುರಂಗಿನ ವೇಷಗಳು ಹಾಗೂ ತಿಂಡಿ ತೀರ್ಥಗಳು. ಈ ಸಮಯದಲ್ಲಿ ಅಮೆರಿಕದ ಮಕ್ಕಳೆಲ್ಲಾ ಚಿತ್ರ ವಿಚಿತ್ರ ಧಿರಿಸಿನಲ್ಲಿ ಮಿಂಚಿ, ತಮ್ಮ ಏರಿಯಾಗಳಲ್ಲಿರುವ ಮನೆ ಮನೆಗಳಿಗೆ ಭೇಟಿ ಕೊಟ್ಟು ಕ್ಯಾಂಡಿಗಳನ್ನು ಕೇಳುತ್ತಾರೆ.

‘Trick or Treat’ ಎಂದು ಕರೆಯಲ್ಪಡುವ ಈ ಸಂಪ್ರದಾಯದಲ್ಲಿ ಮಕ್ಕಳು ತಮ್ಮ ಅಕ್ಕಪಕ್ಕದ ಮನೆಗಳಿಗೆ ತೆರಳಿ ಅಲ್ಲಿರುವ ಹಿರಿಯರಿಂದ ಕ್ಯಾಂಡಿಗಳನ್ನು ಕೇಳುತ್ತಾರೆ. ಒಂದು ವೇಳೆ ಕ್ಯಾಂಡಿ ಕೊಡದೇ ಇದ್ದಲ್ಲಿ, ಅಂಥವರ ಮನೆಗಳ ಮೇಲೆ ದಾಳಿ ಮಾಡುತ್ತವೆ ಈ ಮಕ್ಕಳು.

ಆದರೆ ಈ ಬಾರಿ ಕೋವಿಡ್-19 ಹಾವಳಿ ಎಲ್ಲೆಡೆ ಇರುವ ಕಾರಣದಿಂದ ಈ ಬಾರಿ ‘Trick or Treat’ ಆಚರಣೆ ಬೇಡ ಎಂದು ಪೋಷಕರು ತಂತಮ್ಮ ಮಕ್ಕಳಿಗೆ ಹೇಳಿಕೊಡುತ್ತಿದ್ದಾರೆ. ಆದರೆ ಸಾಮಾಜಿಕ ಅಂತರ ಕಾಪಾಡಿಕೊಂಡು ಈ ಆಚರಣೆ ಮಾಡಲು ಅನೇಕ ಟ್ರಿಕ್‌ಗಳನ್ನು ಕಂಡುಕೊಂಡಿದ್ದಾರೆ ಜನತೆ.

ಓಹಿಯೋದ ಆಂಡ್ರ‍್ಯೂ ಬಿಯಾಟ್ಟಿ ಹೆಸರಿನ ವ್ಯಕ್ತಿಯೊಬ್ಬರು ವಿಶೇಷ ಕೊಳವೆಯೊಂದನ್ನು ಸೃಷ್ಟಿಸಿದ್ದು, ಅದರ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಂಡೇ ಮಕ್ಕಳಿಗೆ ಕ್ಯಾಂಡಿಗಳನ್ನು ನೀಡುವ ವ್ಯವಸ್ಥೆಯನ್ನು ಮಾಡಿದ್ದಾರೆ. ಈ ಕೊಳವೆಯನ್ನು ಹ್ಯಾಂಡ್ ‌ರೇಲ್‌ಗೆ ತಗುಲಿಹಾಕಿ, ಅದರ ಮೂಲಕ ಕ್ಯಾಂಡಿಗಳನ್ನು ಮಕ್ಕಳತ್ತ ತಳ್ಳಬಹುದಾಗಿದೆ.

https://www.facebook.com/andrew.beattie2/posts/10158054231195141

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...