ಬಾಲಿವುಡ್ನಲ್ಲಿ ನಟಿ ಕಂಗನಾ ರನಾವತ್ ಹಾಗೂ ಊರ್ಮಿಳಾ ಮಾತೊಂಡ್ಕರ್ ನಡುವೆ ನಡೆಯುತ್ತಿರುವ ಗಲಾಟೆಯ ನಡುವೆ ಇದೀಗ ಅಮೂಲ್ ಬಿಡುಗಡೆ ಮಾಡಿದ್ದ ಜಾಹಿರಾತು ವಿವಾದಕ್ಕೆ ಕಾರಣವಾಗಿದೆ.
ಈ ಜಾಹಿರಾತಿನಲ್ಲಿ, ಅಮೂಲ್ ಪ್ರಸಿದ್ಧ ಬಾಲಕಿಯ ಫೋಟೋದಲ್ಲಿರುವ ಜಾಗದಲ್ಲಿ, ಊರ್ಮಿಳಾ ಮಾತೊಂಡ್ಕರ್ ಇರುವ ರಂಗೀಲಾ ಚಿತ್ರದ ಕಾರ್ಟೂನ್ ಹಾಕಿ, ನಾನಿನ್ನು ಚಿಕ್ಕವಳಲ್ಲ ಎನ್ನುವ ಕಾಮೆಂಟ್ ಹಾಕಿದೆ.
ಇದಕ್ಕೆ ಬಾಲಿವುಡ್ನ ಹಲವು ಸೆಲೆಬ್ರಿಟಿಗಳು ಅಮೂಲ್ ವಿರುದ್ಧ ತಿರುಗಿಬಿದ್ದಿದ್ದು, ಈ ರೀತಿಯ ಕೀಳುಮಟ್ಟದ ಪ್ರಚಾರಕ್ಕೆ ಅಮೂಲ್ ಕೈಹಾಕಬಾರದಿದ್ದು ಎಂದಿದ್ದಾರೆ.
ಇನ್ನು ಇದಕ್ಕೂ ಮೊದಲು ಬಾಲಿವುಡ್ನ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದ ಕಂಗನಾ, ಊರ್ಮಿಳಾ ಸಾಫ್ಟ್ ಪೋರ್ನ್ ಸ್ಟಾರ್ ಎಂಬ ಹೇಳಿಕೆ ಭಾರಿ ವಿವಾದ ಸೃಷ್ಟಿಸಿದೆ. ಇದೀಗ ಇಬ್ಬರು ನಟಿಯರ ಪರ-ವಿರೋಧ ಹೇಳಿಕೆ ಶುರುವಾಗಿದೆ.