ಪಶ್ಚಿಮ ಬಂಗಾಳದ ನೊಡಿಯಾ ಶಾಲಾ ಶಿಕ್ಷಕಿಯಾಗಿರುವ ನೂರ್ಜಾಹನ್ ಖಾತುನ್ ಎನ್ನುವವರು ಮದುವೆಗೆ ಮುನ್ನಾ ದಿನ ರಕ್ತದಾನ ಶಿಬಿರ ಆಯೋಜಿಸಿ ಮಾದರಿಯಾಗಿದ್ದಾರೆ.
ಒಬಿದುರ್ ರೆಹಮಾನ್ ಎನ್ನುವವರನ್ನು ವರಿಸಲಿದ್ದ ನೂರ್ಜಾನ್, ಕೊರೊನಾ ಸಮಯದಲ್ಲಿ ರಕ್ತ ಬ್ಯಾಂಕ್‌ಗಳಲ್ಲಿ ರಕ್ತ ಕಡಿಮೆಯಾಗಿದೆ. ಆದ್ದರಿಂದ
ಈ ರೀತಿ ರಕ್ತದಾನ ಶಿಬಿರ ಆಯೋಜಿಸುವ ಮೂಲಕ ಮಾದರಿಯಾದರು. ಈ ಶಿಬಿರದಲ್ಲಿ ಒಟ್ಟು 32 ಮಂದಿ ರಕ್ತದಾನ ಮಾಡಿದ್ದಾರೆ.
ಇನ್ನು ಇದರೊಂದಿಗೆ ಮಕ್ಕಳಿಗೆ ಪುಸ್ತಕ ಹಂಚಿಕೆಯನ್ನು ಮಾಡಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿ, ಈ ರೀತಿಯ ಸಹಾಯ ಮಾಡುವ ಮೂಲಕ ಕೆಲವರಿಗೆ ಸಹಾಯ ಮಾಡಿದ್ದೇನೆ ಎಂದು ನೂರ್ಜಾನ್ ಹೇಳಿದ್ದಾರೆ. ಈ ಕಾರ್ಯಕ್ಕೆ ನೂರ್ಜಾನ್ ತಂದೆಯೂ ಬೆಂಬಲಿಸಿದ್ದಾರೆ.