ಇಡೀ ವಿಶ್ವವನ್ನು ಬೆಚ್ಚಿ ಬೀಳಿಸಿರುವ ಕೊರೊನಾದಿಂದ ಜನರನ್ನು ರಕ್ಷಿಸಲು ಹಗಲಿರುಳು ಎನ್ನದೇ ವೈದ್ಯಲೋಕ ಹೋರಾಡುತ್ತಿದೆ. ಈ ಹೋರಾಟಕ್ಕೆ ಕೆಲವೊಮ್ಮೆ ಸಿಗುವ ಪ್ರತಿಫಲ ಸಂತಸವನ್ನುಂಟು ಮಾಡುತ್ತಿದೆ.
ಕೊರೊನಾದಿಂದ ಬಳಲುತ್ತಿದ್ದ ವೃದ್ಧರೊಬ್ಬರು ಸಂಪೂರ್ಣ ಗುಣಮುಖರಾದ ಬಳಿಕ, ತನಗೆ ಚಿಕಿತ್ಸೆ ನೀಡಿದ ವೈದ್ಯೆಗೆ ತಾನೇ ಬೆಳದ ಅಕ್ಕಿಯನ್ನು ಗಿಫ್ಟ್ ನೀಡಿದ್ದಾರೆ. ಈ ವಿಷಯವನ್ನು ಡಾ. ಊರ್ವಿ ಶುಕ್ಲಾ ತಮ್ಮ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
15 ದಿನ ಐಸಿಯುನಲ್ಲಿದ್ದ ವೃದ್ಧರು ಬಳಿಕ ಸಂಪೂರ್ಣ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬಳಿಕ ತಮ್ಮ ಹೊಲದಲ್ಲಿ ಬೆಳೆದಿದ್ದ ಭತ್ತವನ್ನು ಅಕ್ಕಿ ಮಾಡಿಸಿ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೆಂಡ್ ಆಗಿದೆ. ಇದು ಕೇವಲ ಗಿಫ್ಟ್ ಅಲ್ಲ, ಇದು ಆಶಿರ್ವಾದ ಎಂದು ನೆಟ್ಟಿಗರು ಹೇಳಿದ್ದಾರೆ.
https://twitter.com/docurvishukla/status/1305502155168788487?ref_src=twsrc%5Etfw%7Ctwcamp%5Etweetembed%7Ctwterm%5E1305502155168788487%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Frichly-deserved-elderly-man-gifts-rice-grown-in-his-field-to-doctors-after-recovering-from-covid%2F653928