ನವದೆಹಲಿ: ಆಮ್ಲಜನಕ ಸಿಲಿಂಡರ್ ದರ ಬಲು ದುಬಾರಿಯಾಗಿದೆ. ಕೊರೊನಾ ಸೋಂಕು ಪ್ರಕರಣ ತೀವ್ರವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಮ್ಲಜನಕ ಸಿಲಿಂಡರ್ ಗಳ ಕೊರತೆ ಎದುರಾಗಿದೆ.
ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಆಮ್ಲಜನಕದ ಸಿಲಿಂಡರ್ ಕೊರತೆ ಕಂಡುಬಂದಿದ್ದು ಬೇಡಿಕೆ ಹೆಚ್ಚಾಗಿರುವುದರಿಂದ ಸಿಲಿಂಡರ್ ದರ ಗಗನಕ್ಕೇರಿದೆ. ಕರ್ನಾಟಕದಲ್ಲಿ ಪ್ರತಿ ಕ್ಯೂಬಿಕ್ ಮೀಟರ್ ಗೆ 13 ರಿಂದ 18 ರೂ. ದರ ನಿಗದಿಪಡಿಸಲಾಗಿತ್ತು. ಈಗ ಪ್ರತಿ ಕ್ಯೂಬಿಕ್ ಮೀಟರ್ ಗೆ 40 ರೂಪಾಯಿವರೆಗೂ ದರ ಹೆಚ್ಚಳವಾಗಿದೆ.
ಉತ್ಪಾದನಾ ಕಂಪನಿಗಳು ಮತ್ತು ಆಸ್ಪತ್ರೆಗಳ ನಡುವೆ ಮಾಡಿಕೊಳ್ಳಲಾದ ಹಳೆಯ ಗುತ್ತಿಗೆಯ ದರಕ್ಕಿಂತ ಈಗಿನ ದರ ಹೆಚ್ಚಳವಾಗಿದೆ. ಕೊರೊನಾಗಿಂತ ಮೊದಲು ಕರ್ನಾಟಕದಲ್ಲಿ 150 ಮೆಟ್ರಿಕ್ ಟನ್ ವರೆಗೂ ಸಿಲಿಂಡರ್ ಬೇಡಿಕೆ ಇತ್ತು. ಈಗ 500 ಮೆಟ್ರಿಕ್ ಟನ್ ವರೆಗೆ ಆಮ್ಲಜನಕದ ಸಿಲಿಂಡರ್ ಬೇಡಿಕೆ ಏರಿಕೆಯಾಗಿದೆ.