ನಾನ್ ವೆಜ್ ಪ್ರಿಯರಿಗೆ ಚಿಕನ್ ಎಂದರೆ ತುಂಬಾ ಇಷ್ಟ. ಇಲ್ಲಿ ಚಪಾತಿ, ಪರೋಟಕ್ಕೆ ಸಖತ್ ಕಾಂಬಿನೇಷನ್ ಆಗಿರುವ ಪೆಪ್ಪರ್ ಚಿಕನ್ ಮಾಡುವ ವಿಧಾನ ಇದೆ ಟ್ರೈ ಮಾಡಿ ನೋಡಿ.
½ ಕೆಜಿ ಚಿಕನ್ ಅನ್ನು ಚೆನ್ನಾಗಿ ತೊಳೆದು 1 ಚಮಚ ಉಪ್ಪು 1 ಟೀ ಸ್ಪೂನ್ ಅರಿಶಿನ ಹಾಕಿ ಬೇಯಲು ಇಡಿ. ಇದು ಬೆಂದ ಬಳಿಕ ಒಂದು ಕಡೆ ಇಟ್ಟು ಬಿಡಿ.
ನಂತರ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ 3 ಚಮಚ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೇ 10 ಎಸಳು ಬೆಳ್ಳುಳ್ಳಿ, 1 ಇಂಚು ಶುಂಠಿಯನ್ನು ಜಜ್ಜಿ ಹಾಕಿ.
ನಂತರ ಇದಕ್ಕೆ 3 ಹಸಿಮೆಣಸು 1 ಈರುಳ್ಳಿಯನ್ನು ಕತ್ತರಿಸಿ ಹಾಕಿ ಈರುಳ್ಳಿ ಕೆಂಪಾಗುತ್ತಿದ್ದಂತೆ ಸೋಯಾ ಸಾಸ್ ಕೂಡ ಸೇರಿಸಿ ಬಳಿಕ ಚಿಕನ್ ಹಾಕಿ ಮಿಕ್ಸ್ ಮಾಡಿ.
ನಂತರ ಇದಕ್ಕೆ 3 ಚಮಚದಷ್ಟು ಕಾಳುಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಸರಿಯಾಗಿ ಬೇಯಿಸಿಕೊಂಡು ಗ್ಯಾಸ್ ಅಫ್ ಮಾಡಿ.