ನಾವೆಲ್ ಕೊರೊನಾ ವೈರಸ್ ಕೊಡುತ್ತಿರುವ ಕಾಟದಿಂದ ಜಗತ್ತಿನಾದ್ಯಂತ ಎಲ್ಲ ಕ್ಷೇತ್ರಗಳಲ್ಲೂ ಸಾಕಷ್ಟು ಮಾರ್ಪಾಡುಗಳಾಗುತ್ತಿವೆ. ಸಂಗೀತ ಕ್ಷೇತ್ರವೂ ಇದಕ್ಕೆ ಭಿನ್ನವಾಗಿಲ್ಲ.
ಜರ್ಮನಿಯ ದಿಯೆಸ್ದೆನ್ ಎಂಬ ಊರಿನ ಅಪಾರ್ಟ್ಮೆಂಟ್ ಒಂದರ ಮಹಡಿ ಮೇಲೆ ಆರ್ಕೆಸ್ಟ್ರಾ ಒಂದನ್ನು ಆಯೋಜಿಸಲಾಗಿತ್ತು. “The Sky above Prohlis” ಹೆಸರಿನ ಈ ಕಚೇರಿ ವೇಳೆ, ಜರ್ಮನಿ, ಸ್ವಿಟ್ಝರ್ಲೆಂಡ್ ಹಾಗೂ ಆಸ್ಟ್ರಿಯಾದ ಆಲ್ಪ್ಸ್ ಪ್ರದೇಶದಲ್ಲಿ ಖ್ಯಾತವಾಗಿರುವ ಹಾಡುಗಳನ್ನು ಹಾಡಲಾಯಿತು.
1984ರ ಒಲಿಂಪಿಕ್ ಕೂಟಕ್ಕೆಂದು ಕಾಂಪೋಸ್ ಮಾಡಲಾದ ಫ್ಯಾನ್ಫೇರ್ ಹಾಡುಗಳನ್ನೂ ಸಹ ಈ ಕಲಾವಿದರು ಇದೇ ವೇಳೆ ಹಾಡಿದ್ದಾರೆ. ಈ ಕಚೇರಿಯನ್ನು ಅಕ್ಕಪಕ್ಕದ ಕಟ್ಟಡಗಳಲ್ಲಿದ್ದ ವಾಸಿಗಳು ತಂತಮ್ಮ ಮನೆಗಳ ಕಿಟಕಿಗಳಿಂದ ವೀಕ್ಷಿಸಿ ಖುಷಿ ಪಟ್ಟಿದ್ದಾರೆ.