ಈ ಬಾರಿಯ ಐಪಿಎಲ್ ಇನ್ನೇನು ಹತ್ತಿರ ಬರುತ್ತಿದ್ದು ವೆಸ್ಟ್ ಇಂಡೀಸ್ ನ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್, ಪಂಜಾಬ್ ತಂಡದ ಆಟಗಾರರಿಗೆ ಆಹಾರ ತಂದವರಿಗೆ ಸೋಷಿಯಲ್ ಡಿಸ್ಟೆನ್ಸ್ ಪ್ರಕಾರ ಒಬ್ಬೊಬ್ಬರನ್ನೇ ಹೋಗಲು ಹೇಳುತ್ತಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಕ್ರಿಸ್ ಗೇಲ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಪ್ರೇಕ್ಷಕರನ್ನು ಮನರಂಜಿಸಲು ಸಜ್ಜಾಗಿದ್ದಾರೆ.
ಕ್ರಿಸ್ ಗೇಲ್ ಅವರ ಈ ಸಾಮಾಜಿಕ ಅಂತರದ ಪಾಠವನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ.