ನೆಟ್ಟಿಗರ ಪುಳಕಗೊಳಿಸಿದ ಹಂದಿಮರಿಯ ಬಾಲ್ ಸರ್ಕಸ್ 13-09-2020 7:08AM IST / No Comments / Posted In: Latest News, International ಟೋಕಿಯೋದ ಮೆಟ್ರೋ ನಿಲ್ದಾಣದಲ್ಲಿ ಚೆಂಡೊಂದರ ಮೇಲೆ ಹಂದಿ ಮರಿಯೊಂದು ಬ್ಯಾಲೆನ್ಸಿಂಗ್ ಸರ್ಕಸ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಪಿಂಕಿ ಹೆಸರಿನ ಈ ಹಂದಿಮರಿಯು ಒಂಬತ್ತು ಸೆಕಂಡ್ಗಳ ಈ ವಿಡಿಯೋದಲ್ಲಿ ತನ್ನ ಮಸ್ತ್ ಪ್ರತಿಭೆಯನ್ನು ತೋರಿದೆ. ನಿಲ್ದಾಣದ ಸ್ವಯಂಚಾಲಿತ ಪ್ರವೇಶ ದ್ವಾರದ ಮೂಲಕ ಹಾದು ಹೋಗುತ್ತಿರುವ ಈ ಹಂದಿಮರಿಯು ತನ್ನ ಬಾಯಿಯಲ್ಲಿ ಟಿಕೆಟ್ ಇಟ್ಟುಕೊಂಡು ಚೆಂಡಿನ ಮೇಲೆ ಉರುಳಿಕೊಂಡು ಸಾಗುತ್ತಿದೆ. ಟ್ವಿಟರ್ನಲ್ಲಿ ಹಂಚಿಕೊಂಡಿರುವ ಈ ವಿಡಿಯೋವನ್ನು ಅದಾಗಲೇ 12.1 ದಶಲಕ್ಷ ಮಂದಿ ವೀಕ್ಷಿಸಿದ್ದು, ’ಈ ಹಂದಿಮರಿ ನಿಲ್ದಾಣಕ್ಕೆ ಬಂದಿದ್ದಾರೂ ಹೇಗೆ?’, ’ಅದು ಎಲ್ಲಿಗೆ ಹೋಗುತ್ತಿದೆ?’ ಎಂದೆಲ್ಲಾ ತಲೆ ಕೆರೆದುಕೊಂಡು ಯೋಚಿಸುತ್ತಿದ್ದಾರೆ. I have a few questions…pic.twitter.com/DLsXtDlJuF — Rex Chapman🏇🏼 (@RexChapman) September 9, 2020