2020ರ ಅರ್ಧ ಭಾಗವನ್ನು ಮುಗಿಸಿ ಸಾಗಿರುವ ನಡುವೆಯೇ ಕೊರೊನಾ ವೈರಸ್ ಸೊಂಕಿನ ಭೀತಿ ಇನ್ನೂ ನಮ್ಮನ್ನು ಬಿಟ್ಟಿಲ್ಲ. ಸಾಂಕ್ರಮಿಕದ ವಿರುದ್ಧ ಸಾಕಷ್ಟು ಅರಿವು ಮೂಡಿಸಲಾಗಿದ್ದು, ಮಕ್ಕಳಿಗಂತೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮಹತ್ವವನ್ನು ಇನ್ನಷ್ಟು ನಾಜೂಕಾಗಿ ಹೇಳಿಕೊಡಲಾಗುತ್ತಿದೆ.
ಜೇಮಿ ಮೇ ಹಾಗು ಜೇ ಎಂಬ ಇಬ್ಬರು ಯೂಟ್ಯೂಬರ್ಗಳು ಇಂಥದ್ದೊಂದು ಜಾಗೃತಿ ಮೂಡಿಸಲು ವಿಡಿಯೋವೊಂದನ್ನು ಮಾಡಿದ್ದಾರೆ. ತಮ್ಮ ‘Wicked Makers,’ ಪೇಜ್ನಲ್ಲಿ, ಮುಂಬರುವ ಹ್ಯಾಲೋವಿನ್ ಹಬ್ಬಕ್ಕೆಂದು ಬಹಳ ಉಪಯುಕ್ತವಾದ DIY (ನಿಮಗೆ ನೀವೇ ಮಾಡಿಕೊಳ್ಳಿ) ಐಟಮ್ ಒಂದನ್ನು ಪರಿಚಯಿಸಿದ್ದಾರೆ.
ದೆವ್ವಗಳು ಹಾಗೂ ಭೂತಗಳ ಇರುವಿಕೆಯನ್ನು ಆಚರಿಸುವ ಈ ಹಬ್ಬವು ಅಕ್ಟೋಬರ್ 31ರಂದು ಬರುತ್ತದೆ. ಇದೇ ನಿಟ್ಟಿನಲ್ಲಿ ತಮ್ಮ ಮನೆಯಂಗಳಳಲ್ಲಿ ‘Candy Slide’ ಒಂದನ್ನು ಅಳವಡಿಸಲಾಗಿದೆ. ಈ ಸ್ಲೈಡ್ನ ಒಂದು ತುದಿಯಲ್ಲಿ ನಿಂತುಕೊಂಡ ವ್ಯಕ್ತಿಯೊಬ್ಬರು ಕ್ಯಾಂಡಿಯನ್ನು ಹಾಕಿದಲ್ಲಿ ಮತ್ತೊಂದು ತುದಿಯಲ್ಲಿ ಮಕ್ಕಳು ಅದನ್ನು ಎತ್ತಿಕೊಳ್ಳಬಹುದು. ನಿಮಗೆ ಈ ವಿಡಿಯೋ ಎಲ್ಲವನ್ನೂ ವಿವರಿಸಿ ತಿಳಿಸುತ್ತದೆ.