ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಮಿಲ್ಕ್ ಶೇಕ್ ಗಳು ಎಂದರೆ ತುಂಬಾ ಇಷ್ಟ. ಇಲ್ಲಿ ಸುಲಭವಾಗಿ ಮಾಡುವ ಚಾಕೋಲೆಟ್ ಮಿಲ್ಕ್ ಶೇಕ್ ಇದೆ. ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು:
ಹಾಲು – 2 ಕಪ್, ಕೊಕೊ ಪೌಡರ್ – 2 ಟೇಬಲ್ ಸ್ಪೂನ್, ಸಕ್ಕರೆ – 4 ಟೇಬಲ್ ಸ್ಪೂನ್, ಬಿಸಿ ನೀರು – 4 ಟೇಬಲ್ ಸ್ಪೂನ್, ಐಸ್ ಕ್ರೀಂ — 2 ಸ್ಕೂಪ್ಸ್ (ಬೇಕಿದ್ದರೆ ಮಾತ್ರ)
ಒಂದು ಬೌಲ್ ಗೆ ಕೊಕೊ ಪೌಡರ್, ಸಕ್ಕರೆ, ಬಿಸಿ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಇದನ್ನು ತಣ್ಣಗಾಗಲು ಬಿಟ್ಟು ಬಿಡಿ. ನಂತರ ಇದನ್ನೆಲ್ಲಾ ಒಂದು ಬ್ಲೆಂಡರ್ ಗೆ ಹಾಕಿ, ಹಾಗೇ ಹಾಲು ಕೂಡ ಸೇರಿಸಿ. (ಐಸ್ ಕ್ರೀಂ ಇಷ್ಟಪಡುವವರು ಐಸ್ ಕ್ರೀಂ ಕೂಡ ಸೇರಿಸಿ. ಮಕ್ಕಳಿಗೆ ಶೀತ, ಕೆಮ್ಮುವಿನ ಸಮಸ್ಯೆ ಇದ್ದರೆ ಐಸ್ ಕ್ರೀಂ ಉಪಯೋಗಿಸಬೇಡಿ) ಬ್ಲೆಂಡ್ ಮಾಡಿಕೊಳ್ಳಿ. ನಂತರ ಇದನ್ನು ಒಂದು ಗಾಜಿನ ಲೋಟದಲ್ಲಿ ಸರ್ವ್ ಮಾಡಿ.