ನವದೆಹಲಿ: ಸೆಪ್ಟಂಬರ್ 1 ರ ಇಂದಿನಿಂದ ಆರು ದಿನಗಳ ಕಾಲ ಜೆಇಇ ಮೇನ್ ಪರೀಕ್ಷೆ ನಡೆಯಲಿದೆ. ಆರು ದಿನಗಳವರೆಗೆ ನಡೆಯುವ ಪರೀಕ್ಷೆಯಲ್ಲಿ ಪ್ರತಿ ಶಿಫ್ಟ್ ನಲ್ಲಿ 85 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
12 ಶಿಫ್ಟ್ ಗಳಲ್ಲಿ ಪರೀಕ್ಷೆ ನಡೆಯಲಿದ್ದು 8.58 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಸೆಪ್ಟೆಂಬರ್ 13ರಂದು ನೀಟ್ ಪರೀಕ್ಷೆ ನಡೆಯಲಿದ್ದು 15.97 ಲಕ್ಷ ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ.
ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಅವರು, ಜೆಇಇ ಮತ್ತು ನೀಟ್ ಪರೀಕ್ಷೆಗೆ ಸಹಕಾರ ನೀಡುವಂತೆ ರಾಜ್ಯಗಳನ್ನು ಕೋರಿದ್ದಾರೆ. ವೈದ್ಯಕೀಯ ದಂತ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ನಡೆಸುವ ನೀಟ್ ಮತ್ತು ಇಂಜಿನಿಯರಿಂಗ್ ಕೋರ್ಸ್ ಪ್ರವೇಶದ ಜೆಇಇ ಪರೀಕ್ಷೆಗೆಗಾಗಿ ರಾಜ್ಯ ಸರ್ಕಾರ ಎಲ್ಲಾ ಅಗತ್ಯವಾದ ಸಹಕಾರ ನೀಡಲಿದೆ.