ಟೆಲಿಕಾಂ ಕಂಪನಿಗಳ ಮಧ್ಯೆ ಸ್ಪರ್ಧೆಯಿದೆ. ಹಾಗಾಗಿ ಕಂಪನಿಗಳು ಗ್ರಾಹಕರಿಗೆ ಅಗ್ಗದ ಪ್ಲಾನ್ ನೀಡ್ತಿವೆ. ಇದ್ರಲ್ಲಿ ಸರ್ಕಾರಿ ಕಂಪನಿ ಬಿ ಎಸ್ ಎನ್ ಎಲ್ ಕೂಡ ಹಿಂದೆ ಬಿದ್ದಿಲ್ಲ. ಬಿ ಎಸ್ ಎನ್ ಎಲ್ ಪಿವಿ -1499 ಹೆಸರಿನ ಹೊಸ ಪ್ರಿಪೇಯ್ಡ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಪ್ಲಾನ್ ನಲ್ಲಿ ಒಮ್ಮೆ ರಿಚಾರ್ಜ್ ಮಾಡಿದ್ರೆ ಗ್ರಾಹಕರು ವರ್ಷಪೂರ್ತಿ ಲಾಭ ಪಡೆಯಬಹುದು.
ಈ ಯೋಜನೆಯು ಕರೆ, ಡೇಟಾ ಮತ್ತು ಸಿಂಧುತ್ವ ಸೇರಿದಂತೆ ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಯೋಜನೆಯಲ್ಲಿ ಗ್ರಾಹಕರು 24 ಜಿಬಿ ಡೇಟಾದೊಂದಿಗೆ ಅನಿಯಮಿತ ಕರೆ ಸೌಲಭ್ಯ ಪಡೆಯಲಿದ್ದಾರೆ. ಈ ಯೋಜನೆ 365 ದಿನಗಳ ಸಿಂಧುತ್ವ ಹೊಂದಿದೆ. ಆದ್ರೆ ಕಂಪನಿ ಆರಂಭಿಕ 90 ದಿನಗಳಲ್ಲಿ ಯೋಜನೆ ಪಡೆಯುವ ಗ್ರಾಹಕರಿಗೆ 30 ದಿನಗಳ ಹೆಚ್ಚುವರಿ ಸಿಂಧುತ್ವ ನೀಡ್ತಿದ್ದು, ಗ್ರಾಹಕರಿಗೆ 395 ದಿನಗಳ ಸಿಂಧುತ್ವ ಸಿಗಲಿದೆ.
ಗ್ರಾಹಕರು ಈ ಯೋಜನೆಯನ್ನು ಸಕ್ರಿಯಗೊಳಿಸಲು ಬಿಎಸ್ಎನ್ಎಲ್ ವೆಬ್ಸೈಟ್ಗೆ ಹೋಗಬಹುದು ಅಥವಾ ಪ್ಲ್ಯಾನ್ ಬಿಎಸ್ಎನ್ಎಲ್ 1499 ಎಂದು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 123 ಸಂಖ್ಯೆಗೆ ಎಸ್ಎಂಎಸ್ ಮಾಡಬಹುದು. ಈ ಯೋಜನೆ ಸೆಪ್ಟೆಂಬರ್ 1, 2020 ರಿಂದ ಬಳಕೆದಾರರಿಗೆ ಲಭ್ಯವಿರುತ್ತದೆ.