ಇಳಿ ವಯಸ್ಸಿನಲ್ಲೂ ಉತ್ಸಾಹದ ಚಿಲುಮೆಯಂತೆ ಕಾಣುವ ಇಬ್ಬರು ಮಹಿಳೆಯರು ಹಾಡೊಂದಕ್ಕೆ ಭರ್ಜರಿಯಾಗಿ ಸ್ಟೆಪ್ ಹಾಕುವ ಮೂಲಕ ನೆಟ್ಟಿಗರ ಹೃದಯ ಗೆಲ್ಲುತ್ತಿದ್ದಾರೆ.
ಆಶಾ ಭೋಸ್ಲೆ ದನಿಗೂಡಿಸಿರುವ ಐಕಾನಿಕ್ ಹಾಡು, ’ಪಿಯಾ ತೂ ಕಬ್ ತೋ ಆಜಾ’ ಎಂಬ ಹಾಡಿಗೆ ಈ ಇಬ್ಬರೂ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಆರಂಭದಲ್ಲಿ ಇವರಿಬ್ಬರೊಂದಿಗೆ ಮತ್ತೊಬ್ಬ ವ್ಯಕ್ತಿ ಕುಣಿತ ಹಾಕಿದ್ದಾನೆ. ಆತ ಅಲ್ಲಿಂದ ಹೊರಟುಹೋದ ಬಳಿಕ ಮಹಿಳೆಯರು ನೃತ್ಯದಲ್ಲಿ ಮುಳುಗಿ ಹೋಗಿದ್ದಾರೆ.
ಜೀವನವನ್ನು ಪೂರ್ಣವಾಗಿ ಬದುಕಿ, ಪ್ರತಿಯೊಂದು ಕ್ಷಣವನ್ನೂ ಆನಂದಿಸಬೇಕೆಂಬ ಪರೋಕ್ಷ ಸಂದೇಶವನ್ನು ಕೊಡುತ್ತಿರುವ ಈ ವಿಡಿಯೋಗೆ ಸಖತ್ ಕಾಮೆಂಟ್ಗಳು ಬಂದಿವೆ.