ಕೊರೊನಾ ಬಂದ ಬಳಿಕ ಸೋಂಕು ತಡೆಗಟ್ಟಲು ಹಾಗೂ ಮಾರ್ಗಸೂಚಿ ಪಾಲಿಸುವುದಕ್ಕೆ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಇದಕ್ಕೆ ಇದೀಗ ಮತ್ತೊಂದು ಸೇರ್ಪಡೆಯಾಗಿದೆ.
ಹೌದು, ತಮಿಳುನಾಡಿನ ತಿರುಚಿರಾಪಳ್ಳಿಯ ಬಟ್ಟೆ ಅಂಗಡಿಯ ಲ್ಲಿ ಮಾನವ ಗಾತ್ರದ ರೋಬೋ ಒಂದನ್ನು ಇಡಲಾಗಿದೆ. ಇದಕ್ಕೆ ಝಫೀರಾ ಎಂದು ಹೆಸರಿಡಲಾಗಿದೆ. ಈ ರೋಬೋ ಅಂಗಡಿಗೆ ಬರುವ ಪ್ರತಿಯೊಬ್ಬರು ಮಾಸ್ಕ್ ಧರಿಸಿದ್ದಾರೆಯೇ? ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾರೆಯೇ ಎಂದು ನೋಡುತ್ತದೆ. ಇದರೊಂದಿಗೆ ಬರುವ ಎಲ್ಲರ ಉಷ್ಣಾಂಶವನ್ನು ಪರೀಕ್ಷೆ ಮಾಡುತ್ತದೆ. ಈ ವೇಳೆ ಅಂಗಡಿಯಲ್ಲಿ ಎಲ್ಲರೂ ಕೊರೊನಾ ಮಾರ್ಗಸೂಚಿ ಪಾಲಿಸುತ್ತಾರೆ ಎನ್ನುವುದನ್ನು ಹೇಳುತ್ತಲಿರುತ್ತದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಝಫೀ ರೊಬೊಟ್ಸ್ ಸಂಸ್ಥೆ ಸಿಇಒ ಆಶೀಕ್ ರಹಮಾನ್, ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಆರ್ಟಿಫಿಯಲ್ ಇಂಟಲಿಜೆನ್ಸ್ ಬಳಸಿಕೊಂಡು ಈ ರೋಬೋ ತಯಾರಿಸಲಾಗಿದೆ. ಈ ರೋಬೋ ಅಂಗಡಿಗೆ ಬರುವ ಪ್ರತಿಯೊಬ್ಬ ಗ್ರಾಹಕರ ಸಂಖ್ಯೆ ಹಾಗೂ ಅವರ ಚಲನವಲನದ ಮೇಲೆ ಕಣ್ಣಿಡಲಿದೆ ಎಂದು ಹೇಳಿದ್ದಾರೆ.