ನಿಮ್ಮ ಶತ್ರುಗಳನ್ನು ಮಿತ್ರರಿಗಿಂತ ಹತ್ತಿರವೇ ಇಟ್ಟುಕೊಳ್ಳಿ’ ಎಂಬ ಹೇಳಿಕೆಯನ್ನು ನೆನಪಿಸುವ ಕ್ಲಾಸಿಕ್ ನಿದರ್ಶನವೊಂದರಲ್ಲಿ ಕಪ್ಪೆಯೊಂದು ಹಾವಿನ ಬೆನ್ನ ಮೇಲೆ ವಿಹರಿಸುತ್ತಿರುವ ವಿಡಿಯೋವೊಂದನ್ನು IFS ಅಧಿಕಾರಿ ಸುಶಾಂತಾ ನಂದಾ ಶೇರ್ ಮಾಡಿಕೊಂಡಿದ್ದಾರೆ.
ತನ್ನನ್ನು ಬೇಟೆಯಾಡುವ ಜೀವಿಯ ಬೆನ್ನನ್ನೇ ಏರಿರುವ ಈ ಕಪ್ಪೆ ಲೋಕದ ಪರಿವೇ ಇಲ್ಲದಂತೆ ಅಡ್ಡಾಡುತ್ತಿದೆ. “ನಿಮ್ಮ ಶತ್ರುವಿಗೆ ಬಹಳ ಹತ್ತಿರ ಇರುವುದೂ ಒಂದು ಬದುಕುಳಿಯುವ ತಂತ್ರ” ಎಂದು ನಂದಾ ಈ ಪೋಸ್ಟ್ಗೆ ಕ್ಯಾಪ್ಷನ್ ಹಾಕಿದ್ದಾರೆ.