ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಂದೆಯಾಗಿದ್ದಾರೆ. ಗರ್ಲ್ ಫ್ರೆಂಡ್ ನತಾಶಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈಗ ದಂಪತಿ, ಮಗನಿಗೆ ನಾಮಕರಣ ಮಾಡಿದ್ದಾರೆ.
ಹಾರ್ದಿಕ್ ಪಾಂಡ್ಯ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಇದ್ರಲ್ಲಿ ಮಗನ ಹೆಸರನ್ನು ಬಹಿರಂಗಪಡಿಸಿದ್ದಾರೆ. ಐಷಾರಾಮಿ ಕಾರು ಕಂಪನಿ ಮರ್ಸಿಡಿಸ್, ಪಾಂಡ್ಯಾ ಮಗನಿಗೆ ಆಟಿಕೆಯನ್ನು ಉಡುಗೊರೆಯಾಗಿ ನೀಡಿದೆ.
ಹಾರ್ದಿಕ್ ಪಾಂಡ್ಯ ಇನ್ಸ್ಟಾಗ್ರಾಮ್ ನಲ್ಲಿ ಈ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಮರ್ಸಿಡಿಸ್ ಎಎಂಜಿ ಆಟದ ಕಾರಿನ ಮೇಲೆ ಕುಳಿತಿರುವ ಪಾಂಡ್ಯ, ಅಗಸ್ತ್ಯನ ಮೊದಲ ಎಂಎಂಜಿಗೆ ಧನ್ಯವಾದ ಎಂಎಂಜಿ ಬೆಂಗಳೂರು ಎಂದು ಶೀರ್ಷಿಕೆ ಹಾಕಿದ್ದಾರೆ. ಈ ಮೂಲಕ ಮಗನ ಹೆಸರು ಅಗಸ್ತ್ಯ ಎಂಬುದನ್ನು ಬಹಿರಂಗಪಡಿಸಿದ್ದಾರೆ.