ಆರ್ಥಿಕ ಅನಿಶ್ಚಿತತೆಯ ಮಧ್ಯೆ ಬಂಗಾರ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಸೋಮವಾರ ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ ಸೋಮವಾರ ಚಿನ್ನದ ಬೆಲೆ ಹೆಚ್ಚಾಗಿದೆ. ದೆಹಲಿಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 340 ರೂಪಾಯಿ ಹೆಚ್ಚಾಗಿದೆ. ಬೆಳ್ಳಿಯ ಬೆಲೆ ಪ್ರತಿ ಕೆ.ಜಿ.ಗೆ 1,306 ರೂಪಾಯಿ ಏರಿಕೆ ಕಂಡಿದೆ.
ಸೋಮವಾರ ಚಿನ್ನದ ಬೆಲೆ 340 ರೂಪಾಯಿ ಏರಿಕೆಯೊಂದಿಗೆ 10 ಗ್ರಾಂಗೆ 53,611 ರೂಪಾಯಿಯಾಗಿದೆ. ಶುಕ್ರವಾರ 10 ಗ್ರಾಂ ಚಿನ್ನದ ಬೆಲೆ 53,271 ರೂಪಾಯಿಯಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 1,954 ಡಾಲರ್ ಪ್ರತಿ ಔನ್ಸ್ ಆಗಿದೆ.
ಸೋಮವಾರ ಬೆಳ್ಳಿ ಬೆಲೆ ಕೆ.ಜಿ.ಗೆ 1,306 ರೂಪಾಯಿ ಹೆಚ್ಚಾಗಿದ್ದು, ಕೆ.ಜಿ. ಬೆಳ್ಳಿ ಬೆಲೆ 69,820 ರೂಪಾಯಿಯಾಗಿದೆ.ಶುಕ್ರವಾರ ಕೆ.ಜಿ. ಬೆಳ್ಳಿ ಬೆಲೆ 68,514 ರೂಪಾಯಿಯಿತ್ತು.