ಸಾಮಾನ್ಯವಾಗಿ ಜಲಪಾತವೆಂದರೆ ಬೆಳ್ನೊರೆಯುಕ್ಕಿಸುತ್ತಾ ಧುಮ್ಮಿಕ್ಕುವ ನೀರಿನ ಚಿತ್ರವೇ ಮನದಲ್ಲಿ ಮೂಡುತ್ತದೆ. ಆದರೆ ಸ್ವಾತಂತ್ರ್ಯೋತ್ಸವದ ಹಿಗ್ಗಿನಲ್ಲಿದ್ದ ದೇಶವಾಸಿಗಳಿಗೆ ಇಲ್ಲೊಂದು ತ್ರಿವರ್ಣ ಜಲಪಾತದ ಚಿತ್ರವು ಮೈನವಿರೇಳಿಸುತ್ತಿದೆ.
ನಮ್ಮ ರಾಷ್ಟ್ರ ಧ್ವಜದಲ್ಲಿರುವ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣಗಳು ನೀರಿನಲ್ಲಿ ಮಿಶ್ರಗೊಂಡು ಧುಮ್ಮಿಕ್ಕುತ್ತಿರುವಂತೆ ಕಾಣುವ ಈ ವಿಡಿಯೋವನ್ನು ಕಂಡು ಎಲ್ಲರೂ ಬೆರಗಾಗಿದ್ದಾರೆ. ಈ ಬಣ್ಣಗಳ ಪಂಪ್ ಇರುವ ಪೈಪ್ ಒಂದನ್ನು ಬಳಸುವ ಮೂಲಕ ಜಲಪಾತದ ಮೂಲಕ ಈ ಚಿತ್ತಾರ ಮೂಡುವಂತೆ ಮಾಡಲಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ.
74ನೇ ಸ್ವಾತಂತ್ರ್ಯೋತ್ಸವಕ್ಕೂ ಮುನ್ನ ಕೆನಡಾದಿಂದ ಕಾಣಿಸುವಂತೆ ನಯಾಗರಾ ಜಲಪಾತವನ್ನು ಸಹ ತ್ರಿವರ್ಣದಲ್ಲಿ ಮಿನುಗುವಂತೆ ಮಾಡಲಾಗಿತ್ತು. ಆದರೆ, ಬೆಳಕಿನ ಚಿತ್ತಾರಕ್ಕೂ, ಹೀಗೆ ಬಣ್ಣಗಳ ಚಿತ್ತಾರಕ್ಕೂ ಸಾಕಷ್ಟು ವ್ಯತ್ಯಾಸವಿದೆ.