ಕೊರೊನಾ ಸಾಂಕ್ರಮಿಕದ ಕಾರಣದಿಂದ ಜಗತ್ತಿನ ಎಲ್ಲೆಡೆಯೂ ಸಾಕಷ್ಟು ಕಳಾಹೀನತೆ ನೆಲೆಸಿದ್ದು, ಬರೀ ಡಲ್ ಕ್ಷಣಗಳೇ ಸುದ್ದಿಯಾಗುತ್ತಿವೆ. ಇವೆಲ್ಲದರ ನಡುವೆ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿರುವ ವಿಡಿಯೋವೊಂದಲ್ಲಿ ವೃದ್ಧ ದಂಪತಿಗಳಿಬ್ಬರು ಲವ್ ಸಾಂಗ್ಗಳನ್ನು ಹಾಡಿಕೊಂಡು ಒಬ್ಬರೊಬ್ಬರು ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ.
ಫ್ರಾನ್ನಿ ಹಾಗೂ ಎಡ್ಡಿ ಹೆಸರಿನ ಈ ಹಿರಿಯ ದಂಪತಿಗಳು ಕ್ಯಾರಂಟೈನ್ನಲ್ಲಿದ್ದು, ಅವರೀಗ ಪರಸ್ಪರರ ಕಂಪನಿಯನ್ನು ಎಂಜಾಯ್ ಮಾಡುತ್ತಿದ್ದಾರೆ. ಬಲೇ ರೊಮ್ಯಾಂಟಿಕ್ ಮೂಡ್ನಲ್ಲಿರುವ ಈ ಇಬ್ಬರೂ ಒಟ್ಟಿಗೆ ಹಾಡುತ್ತಿರುವುದನ್ನು ನೋಡುವುದೇ ಬಲೇ ಮುದ್ದಾಗಿದೆ.
ಇಬ್ಬರಿಗೂ 90+ ವರ್ಷ ವಯಸ್ಸಾಗಿದ್ದು, 73 ವರ್ಷಗಳಿಂದ ದಾಂಪತ್ಯದಲ್ಲಿದ್ದಾರೆ.
https://twitter.com/karaswisher/status/1294129839369265153?ref_src=twsrc%5Etfw%7Ctwcamp%5Etweetembed%7Ctwterm%5E1294129839369265153%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fgod-bless-them-quarantined-elderly-couple-break-into-love-songs-adorable-video-goes-viral%2F637490