ಕೋಲ್ಕತ್ತಾ: ಜಾಧವಪುರ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ಕೊರೊನಾ ಹಾಗೂ ಇತರ ವೈರಸ್ ಗಳನ್ನು ಕೊಲ್ಲುವ ಇಲೆಕ್ಟ್ರಾನಿಕ್ ಮಾಸ್ಕ್ ಕಂಡು ಹಿಡಿದಿದ್ದಾರೆ.
ಆ ಮಾಸ್ಕ್ ಹಾಕುವುದರಿಂದ ಕೋವಿಡ್-19 ನಿಂದ ಬಚಾವಾಗಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿವಿಯ ಉಪಕರಣ ವಿಭಾಗದಿಂದ ಈ ಮಾಸ್ಕ್ ಮಾದರಿ ತಯಾರಿಸಲಾಗಿದೆ. ಸಂಬಂಧಪಟ್ಟ ಇಲಾಖೆಗಳ ಅನುಮೋದನೆ ದೊರೆತ ನಂತರವಷ್ಟೆ ಅಧಿಕೃತವಾಗಿ ಉತ್ಪಾದನೆ ಪ್ರಾರಂಭಿಸಲಾಗುವುದು ಎಂದು ಸಂಶೋಧನಾ ತಂಡದಲ್ಲಿದ್ದ ವಿವಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾರುಕಟ್ಟೆಯಲ್ಲಿ ಸಿಗುವ ತ್ರಿ ಲೇಯರ್ ಮಾಸ್ಕ್ ಗಿಂತ ಹೆಚ್ಚು ಸುರಕ್ಷಿತವಾಗಿದೆ. ತನ್ನ ಬಳಿ ಬರುವ ಸಾರ್ಸ್- 2 ಸೇರಿ ಯಾವುದೇ ವೈರಸ್ ಗಳನ್ನು ನಾಶ ನಾಡುವ ಸಾಮರ್ಥ್ಯ ಹೊಂದಿದೆ.
“ಮಾದರಿ ಸಿದ್ಧವಿದೆ. ಆದರೆ, ನಾವು ಐಸಿಎಂಆರ್ ನಿಂದ ಅನುಮೋದನೆಗಾಗಿ ದಾಖಲೆಗಳನ್ನು ಕಳಿಸಿದ್ದೇವೆ” ಎಂದು ವಿವಿಯ ವೈಸ್ ಚಾನ್ಸೆಲರ್ ಚಿರಂಜಿಬ್ ಭಟ್ಟಾಚಾರ್ಯ ತಿಳಿಸಿದ್ದಾರೆ.