ಉತ್ತರಾಖಾಂಡ್ನ ನೈನಿತಾಲ್ ಪ್ರದೇಶದಲ್ಲಿ ಮನೆಯೊಂದರಲ್ಲಿ ಕಾಣಿಸಿಕೊಂಡ ಕಾಳಿಂಗ ಸರ್ಪವನ್ನು ಮನೆಯಿಂದ ಆಚೆ ತಂದು ರಕ್ಷಿಸಿರುವ ವಿಡಿಯೊ ವೈರಲ್ ಆಗಿದೆ.
ಐಎಫ್ಎಸ್ ಅಧಿಕಾರಿ ಅಕಾಶ್ ಕುಮಾರ್ ಈ ವಿಡಿಯೊವನ್ನು ಹಾಕಿದ್ದಾರೆ. ಕಾರ್ಕೋಟಕ ವಿಷವನ್ನು ಹೊಂದಿರುವ ಕಾಳಿಂಗ ಸರ್ಪ ಮನೆಯೊಂದರ ಟೇಬಲ್ ಕೆಳಗೆ ಕುಳಿತುಕೊಂಡಿತ್ತು. ಈ ವೇಳೆ ಅರಣ್ಯ ಇಲಾಖೆಯ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಚರಣೆ ನಡೆಸಿದ್ದಾರೆ.
ಹಾವನ್ನು ಚೀಲದೊಳಗೆ ಹಾಕಲು ಸಿಬ್ಬಂದಿ ಚೀಲ ತರುವುದರೊಳಗೆ, ಹಾವನ್ನು ಹಿಡಿದ ವ್ಯಕ್ತಿಯ ಕುತ್ತಿಗೆಯನ್ನು ಸುತ್ತಿಕೊಳ್ಳಲು ಪ್ರಯತ್ನಿಸಿದೆ. ಇದೀಗ ಈ ವಿಡಿಯೊ ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ.