ಉತ್ತರ ಕರೋಲಿನಾದ ಹಿರಿ ಹಿರಿ ಮುತ್ತಜ್ಜಿಯೊಬ್ಬರು ತಮ್ಮ 100ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇವರಿಗೆ 88 ಮೊಮ್ಮಕ್ಕಳಿದ್ದು, ಒಟ್ಟಾರೆ 173 ಮಂದಿಗೆ ಕುಟುಂಬದ ಹಿರಿಯ ಜೀವವಾಗಿದ್ದಾರೆ.
ಜೂಲಿಯಾ ಲೀ ಕೆಲ್ಲಿ ಹೆಸರಿನ ಇವರಿಗೆ 5 ಮಕ್ಕಳಿದ್ದು, 30 ಮೊಮ್ಮಕ್ಕಳು, 88 ಮರಿ ಮಕ್ಕಳು, 49 ಮರಿ ಮೊಮ್ಮಕ್ಕಳು ಹಾಗೂ ಇನ್ನೂ ಒಂದು ಮುಂದಿನ ತಲೆಮಾರಿನ ಒಂದು ಮೊಮ್ಮಗು ಇದೆ. ಪ್ರತಿವರ್ಷವೂ ಈಕೆಯ ಕುಡಿಗಳೆಲ್ಲಾ ಒಂದೆಡೆ ಸೇರಿಕೊಂಡು ರಿ ಯೂನಿಯನ್ ಕಾರ್ಯಕ್ರಮವನ್ನು ಇಟ್ಟುಕೊಳ್ಳುತ್ತಾರೆ.
ಈ ಹಿರಿಯಜ್ಜಿಯ 100ನೇ ಹುಟ್ಟುಹಬ್ಬಕ್ಕೆ ಕೇವಲ ಅವರ ಕುಟುಂಬಸ್ಥರು ಮಾತ್ರವಲ್ಲದೇ ರಸ್ತೆಯಲ್ಲಿ ಹೋಗುತ್ತಿದ್ದ ಮಂದಿಯೆಲ್ಲಾ ವಿಶ್ ಮಾಡಿದ್ದು, ಫಾಕ್ಸ್ 13 ಸುದ್ದಿಯಲ್ಲಿ ವರದಿಯಾಗಿದೆ.
ಈ ಸ್ಮರಣೀಯ ದಿನವನ್ನು ಅವರ ಮೊಮ್ಮಗಳು ಕೆಲ್ಲಿ ಓಕ್ಲೀ ರೆಕಾರ್ಡ್ ಮಾಡಿಕೊಂಡಿದ್ದಾರೆ. ಬಳಿಕ ಈ ಸಂಭ್ರಮಾಚರಣೆಯ ವಿಡಿಯೋಗಳನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ.
https://www.facebook.com/kbural/videos/10100136485115678/?t=1