ಮೂರು ವರ್ಷ ವಯಸ್ಸಿನ ಗೋಲ್ಡನ್ ಲ್ಯಾಬ್ರಡಾರ್ ನಾಯಿಯೊಂದು ಏಕಕಾಲದಲ್ಲಿ 13 ಕರಿಯ ಲ್ಯಾಬ್ರಡಾರ್‌ಗಳಿಗೆ ಜನ್ಮವಿತ್ತಿದೆ. ನಾಯಿಯ ಯಜಮಾನಿ ಕ್ಯಾಥರೀನ್ ಸ್ಮಿತ್ ತನ್ನ ಶ್ವಾನ ಹಾಗೂ ಮರಿಗಳ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಐದರಿಂದ ಆರು ಮರಿಗಳ ನಿರೀಕ್ಷೆಯಲ್ಲಿದ್ದ ಕ್ಯಾಥರೀನ್, ಒಮ್ಮೆಲೆ 13 ಮರಿಗಳಿಗೆ ತನ್ನ ಮುದ್ದಿನ ನಾಯಿ ಜನ್ಮವಿತ್ತಿದ್ದನ್ನು ಕಂಡು ಬೆರಗಾಗಿದ್ದಾರೆ. ಇದೇ ಪುಳಕದಲ್ಲಿ ಆಕೆ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ಮೊದಲ 20 ನಿಮಿಷಗಳಲ್ಲಿ ನಾಲ್ಕು ಮರಿಗಳಿಗೆ ಜನ್ಮವಿತ್ತ ಲೂಸಿ, ನಾಲ್ಕು ಗಂಟೆಗಳ ಅವಧಿಯಲ್ಲಿ ಒಟ್ಟಾರೆ 13 ಮರಿಗಳಿಗೆ ಜನ್ಮವಿತ್ತಿದ್ದಾಳೆ.
ಎಂಟು ವರ್ಷ ವಯಸ್ಸಿನ ಕರಿ ಲ್ಯಾಬ್ರಡಾರ್ ಬಾಷನ್‌ನೊಂದಿಗೆ ಸಂಧಿಸಿದ ಕೆಲವೇ ತಿಂಗಳುಗಳ ಬಳಿಕ ಲೂಸಿ ಇಷ್ಟು ಮರಿಗಳಿಗೆ ಜನ್ಮವಿತ್ತಿದ್ದಾಳೆ. ನವೆಂಬರ್ 2014ರಲ್ಲಿ ಇಂಗ್ಲೆಂಡ್‌ನಲ್ಲಿ ಒಮ್ಮೆಲೇ 24 ಮರಿಗಳಿಗೆ ಜನ್ಮವಿತ್ತ ಟಿಯಾ ಎಂಬ ನೆಪೋಲಿಯನ್ ಮಿಸ್ತಿಫ್ ಈ ವಿಚಾರದಲ್ಲಿ ದಾಖಲೆ ಹೊಂದಿದ್ದಾಳೆ.