ಸೀಲ್ (ಕಡಲು ಪ್ರಾಣಿ) ಆಗಿಂದ್ದಾಗೆ ಜನರೊಂದಿಗೆ ಕಾಣಿಸಿಕೊಳ್ಳುವ, ಜನರೊಂದಿಗೆ ಬೆರೆಯುವ ವಿಡಿಯೋ ನೋಡಿರುತ್ತೇವೆ. ಇದೀಗ ಇದೇ ರೀತಿಯ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಹೌದು, ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸೀಲ್ ಪ್ರಾಣಿಯೊಂದು ಯುವಕನೋರ್ವನ ಕಾಲನ್ನು ಎಳೆಯುತ್ತಾ ಆಹಾರ ನೀಡುವಂತೆ ಕೇಳುತ್ತಿದೆ. ಯುವಕನ ಕೈನಲ್ಲಿ ಆಹಾರ ಪದಾರ್ಥವಿದ್ದು, ಅವುಗಳನ್ನು ಅಲ್ಲಿರುವ ಇತರ ಪ್ರಾಣಿಗಳಿಗೆ ಹಾಕುತ್ತಿದ್ದಾನೆ. ಆ ವೇಳೆ ಸೀಲ್ ತನಗೂ ನೀಡು ಎನ್ನುವ ರೀತಿಯಲ್ಲಿ ಕೇಳುವ ರೀತಿಯಲ್ಲಿ ಈ ವಿಡಿಯೋಯಿದೆ.
ವಿಡಿಯೋವನ್ನು ನೋಡಿದರೆ ಅದು ಯಾವುದೋ ಒಂದು ಸಮುದ್ರ ಪ್ರಾಣಿಗಳಿರುವ ಝೂನಂತಿದೆ. ಇದರಲ್ಲಿ ಯುವಕ ಎಲ್ಲ ಪ್ರಾಣಿಗಳಿಗೆ ಆಹಾರ ನೀಡುತ್ತಿದ್ದಾನೆ. ಇದೀಗ ಈ ವಿಡಿಯೋ ಭಾರಿ ವೈರಲ್ ಆಗಿದ್ದು, ಸುಮಾರು 14 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಸಾವಿರಾರು ಲೈಕ್ಸ್, ಕಾಮೆಂಟ್‌ಗಳು ಬಂದಿದೆ.
https://twitter.com/sapselv/status/1292715717763035142?ref_src=twsrc%5Etfw%7Ctwcamp%5Etweetembed%7Ctwterm%5E1292715717763035142%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fviral-video-shows-a-seal-nudging-mans-foot-for-food-netizens-have-mixed-reactions%2F635139