alex Certify ಯುವಕನ ಕಾಲು ತಟ್ಟಿ ಆಹಾರ ಕೇಳಿದ ಸೀಲ್‌ ವಿಡಿಯೊ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುವಕನ ಕಾಲು ತಟ್ಟಿ ಆಹಾರ ಕೇಳಿದ ಸೀಲ್‌ ವಿಡಿಯೊ ವೈರಲ್

ಸೀಲ್‌ (ಕಡಲು ಪ್ರಾಣಿ) ಆಗಿಂದ್ದಾಗೆ ಜನರೊಂದಿಗೆ ಕಾಣಿಸಿಕೊಳ್ಳುವ, ಜನರೊಂದಿಗೆ ಬೆರೆಯುವ ವಿಡಿಯೋ ನೋಡಿರುತ್ತೇವೆ. ಇದೀಗ ಇದೇ ರೀತಿಯ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.

ಹೌದು, ಐಎಫ್‌ಎಸ್‌ ಅಧಿಕಾರಿ ಸುಶಾಂತ್‌ ನಂದಾ ಅವರು ಈ ವಿಡಿಯೋವನ್ನು ಶೇರ್‌ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸೀಲ್‌ ಪ್ರಾಣಿಯೊಂದು ಯುವಕನೋರ್ವನ ಕಾಲನ್ನು ಎಳೆಯುತ್ತಾ ಆಹಾರ ನೀಡುವಂತೆ ಕೇಳುತ್ತಿದೆ. ಯುವಕನ ಕೈನಲ್ಲಿ ಆಹಾರ ಪದಾರ್ಥವಿದ್ದು, ಅವುಗಳನ್ನು ಅಲ್ಲಿರುವ ಇತರ ಪ್ರಾಣಿಗಳಿಗೆ ಹಾಕುತ್ತಿದ್ದಾನೆ. ಆ ವೇಳೆ ಸೀಲ್‌ ತನಗೂ ನೀಡು ಎನ್ನುವ ರೀತಿಯಲ್ಲಿ ಕೇಳುವ ರೀತಿಯಲ್ಲಿ ಈ ವಿಡಿಯೋಯಿದೆ.

ವಿಡಿಯೋವನ್ನು ನೋಡಿದರೆ ಅದು ಯಾವುದೋ ಒಂದು ಸಮುದ್ರ ಪ್ರಾಣಿಗಳಿರುವ ಝೂನಂತಿದೆ. ಇದರಲ್ಲಿ ಯುವಕ ಎಲ್ಲ ಪ್ರಾಣಿಗಳಿಗೆ ಆಹಾರ ನೀಡುತ್ತಿದ್ದಾನೆ. ಇದೀಗ ಈ ವಿಡಿಯೋ ಭಾರಿ ವೈರಲ್‌ ಆಗಿದ್ದು, ಸುಮಾರು 14 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಸಾವಿರಾರು ಲೈಕ್ಸ್‌, ಕಾಮೆಂಟ್‌ಗಳು ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...