ನೈಜೀರಿಯಾದ 11 ವರ್ಷದ ಹುಡುಗನೊಬ್ಬ ಬರಿಗಾಲಿನಲ್ಲಿ ಬ್ಯಾಲೆ ನೃತ್ಯಕ್ಕೆ ಹೆಜ್ಜೆ ಹಾಕುವ ಮೂಲಕ ಜಗತ್ತಿನ ಗಮನ ಸೆಳೆದಿದ್ದಾನೆ. ಆಂತೋಣಿ ಮೆಸೋಮಾ ಹೆಸರಿನ ಈ ಹುಡುಗ ತನ್ನ ನೃತ್ಯದ ಹೆಜ್ಜೆಗಳ ಮೂಲಕ ಲಕ್ಷಾಂತರ ಮಂದಿಯ ಮೆಚ್ಚುಗೆ ಗಿಟ್ಟಿಸಿದ್ದಾನೆ.
ಇಲ್ಲಿನ ನೃತ್ಯ ಅಕಾಡೆಮಿಯೊಂದರ ಮುಂದೆ ಈ ಹುಡುಗ, ರೈಲುಗಳು ಓಡಾಡುವ ಜಾಗದಲ್ಲಿ ಬರಿಗಾಲಿನ ಬ್ಯಾಲೆ ನೃತ್ಯ ಮಾಡುತ್ತಾ ವೈರಲ್ ಆಗಿದ್ದಾನೆ. ಈ ವಿಡಿಯೋವನ್ನು 3.2 ಲಕ್ಷ ಬಾರಿ ವೀಕ್ಷಿಸಲಾಗಿತ್ತು.
ಅಮೆರಿಕದ Ballet Beyond Bordersನ ಸ್ಕಾಲರ್ಶಿಪ್ ಗೆದ್ದಿರುವ ಈ ಹುಡುಗ ಮುಂದಿನ ವರ್ಷದಿಂದ ತರಬೇತಿ ಪಡೆಯಲಿದ್ದಾನೆ. ಇದರೊಂದಿಗೆ ಬೇಸಿಗೆಯಲ್ಲಿ ತರಬೇತಿ ಪಡೆದುಕೊಳ್ಳಲೆಂದು ಹುಡುಗನಿಗೆ ಇದೇ ಥಿಯೇಟರ್ ಅಂತರ್ಜಾಲದ ಸಂಪರ್ಕದ ವ್ಯವಸ್ಥೆ ಮಾಡಿದೆ.
https://www.instagram.com/p/CBjt6B-A0aM/?utm_source=ig_embed