ದೇಶದಲ್ಲಿ ‘ಒನ್ ನೇಷನ್ ಒನ್ ರೇಷನ್ ಕಾರ್ಡ್’ ವ್ಯವಸ್ಥೆ ಜಾರಿಗೆ ಬಂದಿದೆ. ಇದ್ರ ನಂತ್ರ ಪಡಿತರ ಚೀಟಿಗೆ ಇನ್ನಷ್ಟು ಮಹತ್ವ ಬಂದಿದೆ. ರೇಷನ್ ಕಾರ್ಡ್, ಅಗ್ಗದ ಪಡಿತರ ತೆಗೆದುಕೊಳ್ಳಲು ನೆರವಾಗುವ ಜೊತೆಗೆ ಗುರುತಿನ ಚೀಟಿಯಾಗಿಯೂ ಕಾರ್ಯ ನಿರ್ವಹಿಸುತ್ತದೆ. ಈ ಯೋಜನೆ ಜಾರಿಗೆ ಬಂದ ನಂತ್ರ ಯಾವುದೇ ರಾಜ್ಯದ ವ್ಯಕ್ತಿಯು ಇಡೀ ದೇಶದಲ್ಲಿ ಎಲ್ಲಿಯಾದರೂ ಅಗ್ಗದ ದರದಲ್ಲಿ ಪಡಿತರವನ್ನು ತೆಗೆದುಕೊಳ್ಳಬಹುದು.
ಪಡಿತರ ಚೀಟಿ, ಆಧಾರ್ ಮತ್ತು ಪ್ಯಾನ್ ಕಾರ್ಡ್‌ನಷ್ಟೇ ಮುಖ್ಯ. ನಿಮ್ಮ ಬಳಿ ಇನ್ನೂ ಪಡಿತರ ಚೀಟಿ ಇಲ್ಲದಿದ್ದರೆ ಭಯಪಡುವ ಅಗತ್ಯವಿಲ್ಲ. ಮನೆಯಲ್ಲಿ ಕುಳಿತುಕೊಂಡು ಸ್ಮಾರ್ಟ್‌ಫೋನ್ ಮೂಲಕ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಎಲ್ಲ ರಾಜ್ಯಗಳು ವೆಬ್‌ಸೈಟ್ ರಚಿಸಿವೆ. ನೀವು ವಾಸಿಸುವ ರಾಜ್ಯದ ವೆಬ್ಸೈಟ್ ಗೆ ಹೋಗಿ ಅರ್ಜಿ ಸಲ್ಲಿಸಬಹುದು.
ಬಡತನ ರೇಖೆಗಿಂತ ಮೇಲೆ, ಬಡತನ ರೇಖೆಗಿಂತ ಕೆಳಗೆ ಹಾಗೂ ಅಂತ್ಯೋದಯ ಕುಟುಂಬಗಳಿಗೆಂದು ಮೂರು ರೀತಿಯ ಪಡಿತರ ಚೀಟಿಯಿದೆ. ವ್ಯಕ್ತಿಯ ಆದಾಯದ ಆಧಾರದ ಮೇಲೆ ಇದನ್ನು ವಿಂಗಡಿಸಲಾಗಿದೆ.
ಪಡಿತರ ಚೀಟಿ ಪಡೆಯಲು ಭಾರತದ ಪ್ರಜೆಯಾಗಿರುವುದು ಕಡ್ಡಾಯವಾಗಿದೆ. ಈ ಮೊದಲು ಯಾವುದೇ ರಾಜ್ಯದ ಪಡಿತರ ಚೀಟಿ ಹೊಂದಿರದ ವ್ಯಕ್ತಿಗೆ ಮಾತ್ರ ಪಡಿತರ ಚೀಟಿ ಸಿಗುತ್ತದೆ. ಪಡಿತರ ಚೀಟಿ ಹೆಸರಿರುವ ವ್ಯಕ್ತಿ ವಯಸ್ಸು 18 ವರ್ಷಕ್ಕಿಂತ ಹೆಚ್ಚಿರಬೇಕು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಪೋಷಕರ ಪಡಿತರ ಚೀಟಿಯಲ್ಲಿ ಸೇರಿಸಲಾಗಿದೆ.
ಒಂದು ಕುಟುಂಬವು ಕುಟುಂಬದ ಮುಖ್ಯಸ್ಥರ ಹೆಸರಿನಲ್ಲಿ ಪಡಿತರ ಚೀಟಿ ಪಡೆಯುತ್ತದೆ. ಪಡಿತರ ಚೀಟಿಯಲ್ಲಿ ಸೇರ್ಪಡೆಗೊಳ್ಳುತ್ತಿರುವ ಸದಸ್ಯರು ಕುಟುಂಬದ ಮುಖ್ಯಸ್ಥರೊಂದಿಗೆ ನಿಕಟ ಸಂಬಂಧವನ್ನು ಹೊಂದಿರಬೇಕು. ಕುಟುಂಬದ ಯಾವುದೇ ಸದಸ್ಯರ ಹೆಸರು ಇದಕ್ಕೂ ಮೊದಲು ಯಾವುದೇ ಪಡಿತರ ಚೀಟಿಯಲ್ಲಿ ಇರಬಾರದು.
ಪಡಿತರ ಚೀಟಿ ಪಡೆಯಲು ಮೊದಲು ನಿಮ್ಮ ರಾಜ್ಯದ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು. Apply online for ration card ಮೇಲೆ ಕ್ಲಿಕ್ ಮಾಡಬೇಕು. ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ಆರೋಗ್ಯ ಕಾರ್ಡ್, ಚಾಲನಾ ಪರವಾನಗಿ ಇತ್ಯಾದಿಗಳನ್ನು ಪಡಿತರ ಚೀಟಿಗೆ ದಾಖಲೆಯಾಗಿ ನೀಡಬೇಕು.
ರೇಷನ್ ಕಾರ್ಡ್‌ಗೆ ಅರ್ಜಿ ಶುಲ್ಕ 5 ರೂಪಾಯಿಯಿಂದ 45 ರೂಪಾಯಿವರೆಗಿದೆ. ಅರ್ಜಿಯನ್ನು ಭರ್ತಿ ಮಾಡಿದ ನಂತರ ಶುಲ್ಕವನ್ನು ಪಾವತಿಸಬೇಕು. ಪರಿಶೀಲನೆಯ ನಂತರ, ನಿಮ್ಮ ಅಪ್ಲಿಕೇಶನ್ ಸರಿಯಾಗಿ ಕಂಡು ಬಂದಲ್ಲಿ ಪಡಿತರ ಚೀಟಿ ನೀಡಲಾಗುವುದು.
ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ಸರ್ಕಾರ ನೀಡಿದ ಯಾವುದೇ ಐ ಕಾರ್ಡ್, ಆರೋಗ್ಯ ಕಾರ್ಡ್, ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್, ಪಾಸ್ಪೋರ್ಟ್ ಗಾತ್ರದ ಫೋಟೋ, ಆದಾಯ ಪ್ರಮಾಣಪತ್ರ, ವಿಳಾಸ ಪುರಾವೆ, ವಿದ್ಯುತ್ ಬಿಲ್, ಗ್ಯಾಸ್ ಸಂಪರ್ಕದ ಬುಕ್, ದೂರವಾಣಿ ಬಿಲ್, ಬ್ಯಾಂಕ್ ಸ್ಟೇಟ್ಮೆಂಟ್ ಅಥವಾ ಪಾಸ್ಬುಕ್, ಬಾಡಿಗೆ ಒಪ್ಪಂದದಂತಹ ದಾಖಲೆಗಳನ್ನು ಸಹ ನೀಡಬಹುದು. ಸಾಮಾನ್ಯವಾಗಿ ಅರ್ಜಿ ಸಲ್ಲಿಸಿದ 30 ದಿನಗಳ ನಂತ್ರ ಪಡಿತರ ಚೀಟಿ ನಿಮಗೆ ಸಿಗುತ್ತದೆ.