ಈ ಹಿಂದೆ ‘ಕನ್ನಡ ದುನಿಯಾ’ದಲ್ಲಿ ವೈದ್ಯರೊಬ್ಬರು ಕೊರೊನಾ ಕುರಿತು ಸವಿವರವಾದ ಮಾಹಿತಿ ನೀಡಿದ ವರದಿಯನ್ನು ವಿಡಿಯೋದೊಂದಿಗೆ ಪ್ರಕಟಿಸಿದ್ದೆವು. ಕೊರೊನಾ ಅಂದರೆ ಭಯ ಬೇಡ. ಜ್ವರ, ಶೀತದಂತೆ ಇದು ಕೂಡ ಒಂದು ಸಾಧಾರಣ ರೋಗ ಎಂದು ಅವರು ಹೇಳಿದ್ದರು.
ಈ ವರದಿಗೆ ಓದುಗರಿಂದ ಭರ್ಜರಿ ಪ್ರತಿಕ್ರಿಯೆ ಬಂದಿದ್ದು, ವೈದ್ಯ ರಾಜು ಅವರು ಹೇಳಿದ ಧೈರ್ಯದ ಮಾತುಗಳಿಗೆ ಓದುಗರು ಮನದುಂಬಿ ಕೃತಜ್ಞತೆ ಸಲ್ಲಿಸಿದ್ದರು. ಇದೀಗ ಅದೇ ವೈದ್ಯರು ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಡಾ. ರಾಜು, ಕುಟುಂಬದ ಯಾರಾದರೂ ಒಬ್ಬ ಸದಸ್ಯರಿಗೆ ಕೊರೊನಾ ಪಾಸಿಟಿವ್ ಬಂದ ವೇಳೆ ಇತರ ಸದಸ್ಯರು ಏನು ಮಾಡಬೇಕು ಎಂದು ಕೇಳುವ ಸಾಮಾನ್ಯ ಪ್ರಶ್ನೆ ಕುರಿತಂತೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದು, ಇದರ ಜೊತೆಗೆ ಟೆಸ್ಟ್ ಹೆಸರಿನಲ್ಲಿ ನಡೆಯುತ್ತಿರುವ ದಂಧೆಯನ್ನು ತೆರೆದಿಟ್ಟಿದ್ದಾರೆ. ಈ ವಿಡಿಯೋವನ್ನು ನೀವೂ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.
https://www.facebook.com/106521611130177/videos/907184369783249