ವಿಶ್ವದಲ್ಲಿ ಕೊರೊನಾ ಶುರುವಾದ ಬಳಿಕ ಪತ್ರಕರ್ತರಿಗೆ ಶುರುವಾಗಿರುವ ವರ್ಕ್ ಫ್ರಮ್ ಹೋಂ ವೇಳೆ ಆಗುತ್ತಿರುವ ಎಡವಟ್ಟು ಒಂದೆರೆಡಲ್ಲ. ಇದೀಗ ಇದೇ ರೀತಿಯ ವಿಡಿಯೋ ಭಾರಿ ವೈರಲ್ ಆಗಿದೆ.
ಹೌದು, ಆಸ್ಟ್ರೇಲಿಯಾ ಮೂಲದ ನ್ಯೂಸ್ 9 ವಾಹಿನಿಯ ವರದಿಗಾರ್ತಿ ಲಾನಾ ಮರ್ಫಿ ಮೆಲ್ಬೋರ್ನ್ನಲ್ಲಿರುವ ಪೊಲೀಸ್ ಭದ್ರತೆಯ ಬಗ್ಗೆ ಮಾಹಿತಿ ನೀಡುತ್ತಿದ್ದರು. ಆರಂಭದಲ್ಲಿ ಎಲ್ಲವನ್ನು ಸರಿಯಾಗಿ ಮಾಡಿದ ಅವರು, ಕೊನೆಯದಾಗಿ F*****my life ಎಂದು ಹೇಳಿಬಿಟ್ಟಿದ್ದಾರೆ.
ಆದರೆ ಈ ವೇಳೆಗೆ ಸ್ಟೂಡಿಯೋದಲ್ಲಿರುವವರು ಲೈವ್ ನ್ನು ಕಟ್ ಮಾಡಬೇಕಿತ್ತು. ಮಾಡದಿರುವುದೇ ಈ ಎಡವಟ್ಟಿಗೆ ಕಾರಣವಂತೆ.
ಆದರೆ ಈ ಬಗ್ಗೆ ಮರ್ಫಿ ತಮ್ಮ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿದ್ದು, ಈ ತಪ್ಪನ್ನು ಮಾಡಬಾರದಿತ್ತು. ಆದರೂ ನನ್ನ ಬಾಸ್ ಕೆಲಸದಿಂದ ತೆಗೆದಿರುವುದು ನನ್ನ ಪುಣ್ಯ ಎಂದಿದ್ದಾರೆ. ಆದರೆ ನೆಟ್ಟಿಗರು ಮಾತ್ರ ಈ ಘಟನೆಯನ್ನು ಕಾಮಿಡಿಯಾಗಿ ತೆಗೆದುಕೊಂಡಿದ್ದು, ಕೆಲವರು ಮರ್ಫಿ ಅವರ ಕೂದಲು ಅತ್ಯುತ್ತಮವಾಗಿದೆ ಎಂದಿದ್ದಾರೆ.