ಕೋಲಾರ ಜಿಲ್ಲೆ ಕೆಜಿಎಫ್ ನಗರದ ಬಾಲಕೃಷ್ಣ ಬಡಾವಣೆಯಲ್ಲಿ ಬಕ್ರೀದ್ ಹಬ್ಬಕ್ಕೆ ಬಲಿಕೊಡಲು ತಂದಿದ್ದ 2 ಒಂಟೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಫಾಸಿಲ್ ಎಂಬಾತನಿಗೆ ಸೇರಿದ ಒಂಟೆಗಳನ್ನು ಮದೀನ ಮಸೀದಿ ಬಳಿ ಇರಿಸಲಾಗಿದ್ದು, ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ. ಒಂಟೆಗಳನ್ನು ವಶಕ್ಕೆ ಪಡೆದು ಮಾಲೂರಿನ ಗೋಶಾಲೆಗೆ ಕಳುಹಿಸಲಾಗಿದೆ.
ಬಕ್ರಿದ್ ಹಬ್ಬದ ಸಂದರ್ಭದಲ್ಲಿ ಒಂಟೆ ಮಾಂಸ ದಾನ ಮಾಡಲಾಗುತ್ತದೆ ಎನ್ನಲಾಗಿದ್ದು, ಜಿಲ್ಲಾಡಳಿತದಿಂದ ಹಸು, ಒಂಟೆ ಬಲಿ ಕೊಡಲು ನಿಷೇಧ ಹೇರಲಾಗಿದೆ. ಬಲಿ ಕೊಡಲು ತಂದಿದ್ದ 2 ಒಂಟೆಗಳನ್ನು ವಶಕ್ಕೆ ಪಡೆದ ಪೊಲೀಸರು ಗೋಶಾಲೆಗೆ ಕಳಿಸಿದ್ದಾರೆ.