ನವದೆಹಲಿ: ಒಂದೇ ದಿನ 710 ರೂಪಾಯಿ ಹೆಚ್ಚಳವಾಗುವುದರೊಂದಿಗೆ 10 ಗ್ರಾಂ ಚಿನ್ನದ ದರ 54 ಸಾವಿರ ರೂ. ಸನಿಹಕ್ಕೆ ತಲುಪಿದೆ.
ಪ್ರಸ್ತುತ ಚಿನ್ನದ ಮೇಲಿನ ಹೂಡಿಕೆ ಹೆಚ್ಚಾಗಿದೆ. ಅಲ್ಲದೆ ಹಬ್ಬದ ಸೀಸನ್ ಕಾರಣ ಬೇಡಿಕೆ ಹೆಚ್ಚಾಗಿ ಕಳೆದ ಕೆಲವು ದಿನಗಳಿಂದ ಏರುಗತಿಯಲ್ಲೇ ಸಾಗುತ್ತಿರುವ ಚಿನ್ನದ ದರ ದಾಖಲೆ ಬರೆಯತೊಡಗಿದೆ.
ಗಗನಮುಖಿಯಾಗಿರುವ ಚಿನ್ನದ ದೆಹಲಿಯಲ್ಲಿ 10 ಗ್ರಾಂ ಶುದ್ಧ ಚಿನ್ನದ ದರ710 ರೂ. ಏರಿಕೆಯಾಗಿ 53,797 ರೂಪಾಯಿ ತಲುಪಿದೆ. ಮುಂಬೈನಲ್ಲಿ 10 ಗ್ರಾಂ ಚಿನ್ನದ ದರ 548 ರೂ. ಹೆಚ್ಚಳವಾಗಿದೆ.