ಮೊದಲೇ ಜನರಿಗೆ ಸೆಲೆಬ್ರಿಟಿಗಳ ಜೀವನದಲ್ಲಿ ಏನೆಲ್ಲಾ ಆಗುತ್ತಿದೆ ಎಂದು ತಿಳಿದುಕೊಳ್ಳಲು ಎಲ್ಲಿಲ್ಲದ ಕಾತರ. ಅದರಲ್ಲೂ ಈ ಲಾಕ್ಡೌನ್ ಟೈಮಲ್ಲಿ ಬೋರ್ ಆದಾಗೆಲ್ಲಾ ಸೆಲೆಬ್ರಿಟಿಗಳ ಸಾಮಾಜಿಕ ಜಾಲತಾಣಗಳನ್ನು ನೋಡುವ ಕುತೂಹಲ ಹೆಚ್ಚೇ ಆಗೋದಿದೆ ಎನ್ನಬಹುದು.
ಹೆಂಗೂ ಈ ಸೆಲೆಬ್ರಿಟಿಗಳೂ ಲಾಕ್ಡೌನ್ ಆಗಿದ್ದಾರೆ. ಸರಿ ಇನ್ನೇನು? ತಮ್ಮ ದಿನನಿತ್ಯದ ಲೈಫ್ನ ಸಣ್ಣಪುಟ್ಟ ಕ್ಷಣಗಳನ್ನೆಲ್ಲಾ ಒಂದೊಂದು ಚಾಲೆಂಜ್ ಅಂತ #tag ಹಾಕಿಕೊಂಡು, ಟ್ರೆಂಡ್ ಮಾಡಿಕೊಂಡು ಸಮಯ ಕಳೆಯುತ್ತಿದ್ದಾರೆ. ಹೇಗೋ ಇವಕ್ಕೆಲ್ಲಾ ಲೈಕ್, ಕಾಮೆಂಟ್ & ಶೇರಿಂಗ್ ಮಾಡೋದಕ್ಕೆ ಜನರು ಇದ್ದಾರಲ್ಲ?
ಇಂಥದ್ದೇ ನಿದರ್ಶನವೊಂದರಲ್ಲಿ ಈ ಬಾಲಿವುಡ್ ನಟೀಮಣಿಯರಾದ ಸೋನಮ್ ಕಪೂರ್, ದಿಯಾ ಮಿರ್ಜಾ, ಸಾನಿಯಾ ಮಿರ್ಜಾ ಎಲ್ಲಾ ಸೇರಿಕೊಂಡು ತಮ್ಮ ತಮ್ಮಲ್ಲೇ Black and White Challenge ಅಂತ ಚಾಲೆಂಜ್ ಮಾಡಿಕೊಂಡಿದ್ದಾರೆ. ಇವರೆಲ್ಲಾ ಬ್ಲಾಕ್ & ವೈಟ್ ಫೋಟೋ ತೆಗೆದುಕೊಂಡು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
https://www.instagram.com/p/CDGt5R1F4bM/?utm_source=ig_embed
https://www.instagram.com/p/CDG7ekUDOZM/?utm_source=ig_embed
https://www.instagram.com/p/CDHHmWkhml3/?utm_source=ig_embed
https://www.instagram.com/p/CDI1gLfn9NA/?utm_source=ig_embed