ದೆಹಲಿಯ ಕಾಶ್ಮೀರೀ ಗೇಟ್ ಬಳಿಯ ಅಂತರರಾಜ್ಯ ಬಸ್ ಟರ್ಮಿನಲ್ (ISBT) ಬಳಿ ಸಂಚಾರ ದಟ್ಟಣೆಯ ಚಿತ್ರವೊಂದು ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡುತ್ತಿದೆ.
ವಾಹನಗಳು ಒಂದೇ ಒಂದು ಇಂಚೂ ಸಹ ಚಲಿಸಲಾರದ ಮಟ್ಟಿಗೆ ರಸ್ತೆ ಜಾಮ್ ಪ್ಯಾಕ್ ಆಗಿದ್ದು, ಈ ಸಾಲುಗಳು ಕೊನೆಯೇ ಇಲ್ಲದಂತೆ ಕಾಣುತ್ತಿದ್ದು, ಗಂಟೆಗಟ್ಟಲೇ ಅಲ್ಲೇ ನಿಂತುಬಿಟ್ಟಿವೆ. ಈ ಚಿತ್ರಗಳನ್ನು ಜುಲೈ 27ರಂದು ಸೆರೆಹಿಡಿಯಲಾಗಿದೆ.
ಮುಂಬೈಯಂತೆ ದೆಹಲಿ ಸಹ ಕೊರೊನಾ ವೈರಸ್‌ನಿಂದ ಭಾರೀ ಪೀಡಿತಗೊಂಡಿದ್ದು, ಕೇಂದ್ರ ಸರ್ಕಾರ ನಿಧಾನವಾಗಿ ಲಾಕ್‌ಡೌನ್ ನಿರ್ಬಂಧವನ್ನು ತೆರವುಗೊಳಿಸುತ್ತಿದ್ದಂತೆಯೇ ಈ ಊರುಗಳ ಸಂಚಾರ ದಟ್ಟಣೆಯು ನಾರ್ಮಲ್ ಸ್ಥಿತಿಗೆ ಬಂದುಬಿಟ್ಟಿದೆ. ಸೋಂಕಿಗೆ ಇನ್ನೂ ಔಷಧವನ್ನೇ ಕಂಡು ಹಿಡಿಯದ ಘಳಿಗೆಯಲ್ಲಿ ಹೀಗೆ ಮನೆಗಳಿಂದ ಆಚೆ ಬರುವುದು ತರವೇ ಎಂಬ ಹಲವಾರು ಪ್ರಶ್ನೆಗಳನ್ನು ಈ ಪೋಸ್ಟ್ ಹುಟ್ಟುಹಾಕಿದೆ.