alex Certify ಮುಖದ ಸೌಂದರ್ಯಕ್ಕೆ ಮೊಟ್ಟೆಯ ʼಫೇಸ್ ಪ್ಯಾಕ್ʼ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಖದ ಸೌಂದರ್ಯಕ್ಕೆ ಮೊಟ್ಟೆಯ ʼಫೇಸ್ ಪ್ಯಾಕ್ʼ…!

ಮೊಗದ ಸೌಂದರ್ಯದ ಬಗ್ಗೆ ಎಲ್ಲರಿಗೂ ಚಿಂತೆ ಇರುತ್ತದೆ. ಮುಖದ ಮೇಲಿನ ಚಿಕ್ಕ ರಂಧ್ರಗಳಿಂದ ಚರ್ಮ, ಕಾಂತಿ ಕಳೆದುಕೊಂಡು ಹೆಚ್ಚಿನ ವಯಸ್ಸನ್ನು ದಯಪಾಲಿಸಿರಬಹುದು. ಇದರ ಪರಿಹಾರಕ್ಕೆ ಹೀಗೆ ಮಾಡಿ.

ಒಂದು ಬಟ್ಟಲಿಗೆ ಟೊಮೆಟೋ ರಸವನ್ನು ಹಿಂಡಿ. ಇದಕ್ಕೆ ಮೊಟ್ಟೆಯ ಒಳಭಾಗ ಸೇರಿಸಿ ಕದಡಿ. ನಾಲ್ಕು ಹನಿ ನಿಂಬೆ ಹಣ್ಣಿನ ರಸವನ್ನು ಹಾಕಿ ಬೆರೆಸಿ. ಇದನ್ನು ಕೈಯಿಂದ ಅಥವಾ ಹತ್ತಿಯಿಂದ ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ತಣ್ಣಗಿನ ನೀರಿನಲ್ಲಿ ಮುಖವನ್ನು ತೊಳೆಯಿರಿ. ಇದರಿಂದ ನಿಮ್ಮ ತ್ವಚೆ ಹೊಳೆಯುವುದು ಮಾತ್ರವಲ್ಲ, ಮುಖದ ಎಣ್ಣೆಯಂಶವೂ ಕಡಿಮೆಯಾಗುತ್ತದೆ.

ನಿಂಬೆಹಣ್ಣಿನ ರಸ, ಸೌತೆಕಾಯಿ ರಸ, ಗುಲಾಬಿ ನೀರಿನೊಂದಿಗೆ ಮೊಟ್ಟೆ ಬೆರೆಸಿ ಚೆನ್ನಾಗಿ ಕಲಕಿ. ಫೇಸ್ ಪ್ಯಾಕ್ ರೂಪದಲ್ಲಿ ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷ ಒಣಗಿದ ಬಳಿಕ ಉಗುರು ಬೆಚ್ಚನೆಯ ನೀರಿನಲ್ಲಿ ತೊಳೆಯಿರಿ.

ಮೊಟ್ಟೆಯ ಬಿಳಿ ಭಾಗ ಮತ್ತು ನಿಂಬೆರಸದ ಪ್ಯಾಕ್ ಮುಖದಲ್ಲಿ ಇರುವ ಎಣ್ಣೆಯಂಶವನ್ನು ತೆಗೆದು ಮುಖದ ಕಾಂತಿ ಮತ್ತು ಹೊಳಪನ್ನು ಹೆಚ್ಚಿಸುತ್ತದೆ. ಮೊದಲಿಗೆ ಮುಖವನ್ನು ಚೆನ್ನಾಗಿ ತೊಳೆದು ಒರೆಸಿಕೊಳ್ಳಿ. ನಂತರ ಮೊಟ್ಟೆಯ ಬಿಳಿ ಭಾಗಕ್ಕೆ ಅರ್ಧ ಚಮಚ ನಿಂಬೆ ರಸವನ್ನು ಹಾಕಿ. ನಂತರ ಮುಖಕ್ಕೆ ಹಚ್ಚಿ ಒಣಗಲು ಬಿಡಿ. ನಂತರ ತಣ್ಣೀರಿನಲ್ಲಿ ನಿಧಾನವಾಗಿ ತೊಳೆಯಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...