ಫ್ಲಾರಿಡಾದ ಬೀದಿಗಳಲ್ಲಿ ಮನಸೋಯಿಚ್ಛೆ ಅಡ್ಡಾಡುತ್ತಿದ್ದ ಕಾಂಗರೂ ಒಂದನ್ನು ಅಲ್ಲಿನ ಪೊಲೀಸರು ಗುರುವಾರ ಬೆಳಿಗ್ಗೆ ಸೆರೆ ಹಿಡಿದಿದ್ದಾರೆ.
ಕಾಂಗರೂ ಒಂದು ಮನಸೋಯಿಚ್ಛೆ ಅಡ್ಡಾಡುತ್ತಿದೆ ಎಂದು ಇಲ್ಲಿನ ಲಾಡರ್ಡೇಲ್ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ ಬೆನ್ನಿಗೇ ಕಾರ್ಯಪ್ರವೃತ್ತರಾದ ಆರಕ್ಷಕರು ಈ ಪುಂಡ ಕಾಂಗರೂವನ್ನು ತಮ್ಮ ಸ್ಕ್ವಾಡ್ ಕಾರ್ನಲ್ಲಿ ಎತ್ತಾಕಿಕೊಂಡು ಹೋಗಿದ್ದಾರೆ. ಕಾಂಗರೂ ಈಗ ಪೊಲೀಸರ ಕುದುರೆಗಳು ಇರುವ ಜಾಗದಲ್ಲಿ ಇದೆ.
ಈ ಕಾಂಗರೂ ಸಾಕಿದ್ದ ಆಂಟೋನಿ ಮಕಿಯಾಸ್ ಎಂಬಾತ ತನ್ನ ಪ್ರೀತಿಯ ಸಾಕು ಪ್ರಾಣಿಯನ್ನು ಅಲ್ಲಿಂದ ಮರಳಿ ತರಲು ಯತ್ನಿಸುತ್ತಿದ್ದಾರೆ. ಲಾಡರ್ಡೇಲ್ ಪ್ರದೇಶದಲ್ಲಿ ಕಾಂಗರೂ ಸಾಕಲು ಅವಕಾಶ ಇಲ್ಲದ ಕಾರಣ, ಕಾಂಗರೂವನ್ನು ಅದರ ಮಾಲೀಕರಿಗೆ ಹಿಂದಿರುಗಿಸಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.