alex Certify ಸವಿದು ನೋಡಿ ಹಲಸಿನ ಹಣ್ಣಿನ ಇಡ್ಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸವಿದು ನೋಡಿ ಹಲಸಿನ ಹಣ್ಣಿನ ಇಡ್ಲಿ

ಹಲಸಿನಹಣ್ಣು ಇದ್ದರೆ ಅದರಿಂದ ನಾನಾ ಬಗೆಯ ತಿನಿಸುಗಳನ್ನು ಮಾಡಿಕೊಂಡು ಸವಿಯಬಹುದು. ಇಲ್ಲಿ ಬೇಗನೆ ತಯಾರಾಗಿ ಬಿಡುವ ಹಲಸಿನಹಣ್ಣಿನ ಇಡ್ಲಿ ಇದೆ. ಹಲಸಿನಹಣ್ಣಿನ ಸೀಸನ್ ಮುಗಿಯುವುದರೊಳಗೆ ಮಾಡಿಕೊಂಡು ಸವಿಯಿರಿ.

ಬೇಕಾಗುವ ಸಾಮಾಗ್ರಿಗಳು:

15 ರಿಂದ 20ರಷ್ಟು ಹಲಸಿನಹಣ್ಣಿನ ತೊಳೆ, ಅಕ್ಕಿ ತರಿ – 1 ಕಪ್, ಬೆಲ್ಲ – 1 ಕಪ್ (ಪುಡಿ ಮಾಡಿಕೊಂಡಿದ್ದು), ತುಪ್ಪ – 1 ಟೀ ಸ್ಪೂನ್, ಉಪ್ಪು – ಚಿಟಿಕೆ, ಏಲಕ್ಕಿ – ಚಿಟಿಕೆ.

ಮಾಡುವ ವಿಧಾನ:

ಮೊದಲಿಗೆ ಹಲಸಿನಹಣ್ಣಿನ ತೊಳೆಗಳ ಬೀಜ ತೆಗೆದು ತೊಳೆಗಳನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ, ನೀರು ಸೇರಿಸಬೇಡಿ. ಗ್ಯಾಸ್ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಅಕ್ಕಿ ತರಿಯನ್ನು ಸೇರಿಸಿ 5 ನಿಮಿಷಗಳ ಕಾಲ ಹುರಿಯಿರಿ. ನಂತರ ಮಿಕ್ಸಿಯಲ್ಲಿ ರುಬ್ಬಿದ ಹಲಸಿನ ಹಣ್ಣಿನ ಮಿಶ್ರಣಕ್ಕೆ ಈ ತರಿಯನ್ನು ಹಾಕಿ ಬೆಲ್ಲ, ಏಲಕ್ಕಿ ಪುಡಿ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ½ ಗಂಟೆಗಳ ಕಾಲ ಹಾಗೆಯೇ ಇಡಿ.

ನಂತರ ಒಂದು ತಟ್ಟೆಗೆ ತುಪ್ಪ ಸವರಿ ಅದಕ್ಕೆ ಮಾಡಿಟ್ಟುಕೊಂಡ ಈ ಮಿಶ್ರಣ ಹಾಕಿ ಇಡ್ಲಿ ಪಾತ್ರೆಯ ಆವಿಯಲ್ಲಿ ಬೇಯಿಸಿಕೊಂಡರೆ ರುಚಿಕರವಾದ ಹಲಸಿನಹಣ್ಣಿನ ಇಡ್ಲಿ ಸವಿಯಲು ಸಿದ್ಧ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...