ತೀವ್ರ ಗಂಟಲು ನೋವಿನಿಂದ ನರಳುತ್ತಿದ್ದ ಟೋಕಿಯೋದ 25 ವರ್ಷದ ಮಹಿಳೆಯೊಬ್ಬರನ್ನು ಅಲ್ಲಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಶಶಿಮಿ ಎಂಬ ಜಪಾನೀಸ್ ಖಾದ್ಯವೊಂದನ್ನು ಸೇವಿಸಿದ ಬೆನ್ನಿಗೇ ಆಕೆಗೆ ಈ ರೀತಿ ಆಗಿದೆ. ಈ ಖಾದ್ಯದಲ್ಲಿ ಹಸಿ ಮೀನನ್ನು ಸಣ್ಣ ಸ್ಲೈಸ್ಗಳನ್ನಾಗಿ ಕತ್ತರಿಸಿ ಸೋಯಾ ಸಾಸ್ನೊಂದಿಗೆ ಉಣಬಡಿಸಲಾಗುತ್ತದೆ.
ಆ ಮೀನಿನಲ್ಲಿದ್ದ ರೌಂಡ್ವರ್ಮ್ ಪ್ಯಾರಾಸೈಟ್ ಒಂದು ಆಕೆಯ ಗಂಟಲು ಸೇರಿಕೊಂಡಿದೆ. 3.8 ಸೆಂ.ಮೀ ಉದ್ದದ ಈ ಹುಳುವನ್ನು ವೈದ್ಯರು ಸ್ಕ್ಯಾನಿಂಗ್ ಮಾಡಿ ಪತ್ತೆ ಮಾಡಿದ್ದಾರೆ. ಬಳಿಕ ಆ ಹುಳುವನ್ನು ನಾಜೂಕಾಗಿ ಆಕೆಯ ಗಂಟಲಿನಿಂದ ಹೊರತೆಗೆಯಲಾಗಿದೆ.
ಈ ಪ್ರಕರಣವನ್ನು ಅಮೆರಿಕದ Tropical Medicine and Hygiene ವೃತ್ತ ಪತ್ರಿಕೆಯಲ್ಲಿ ಬಿತ್ತರಿಸಲಾಗಿದೆ.