alex Certify ಮಹಿಳೆ ಗಂಟಲು ಪರೀಕ್ಷಿಸಿ ಬೆಚ್ಚಿ ಬಿದ್ದ ವೈದ್ಯರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆ ಗಂಟಲು ಪರೀಕ್ಷಿಸಿ ಬೆಚ್ಚಿ ಬಿದ್ದ ವೈದ್ಯರು…!

ತೀವ್ರ ಗಂಟಲು ನೋವಿನಿಂದ ನರಳುತ್ತಿದ್ದ ಟೋಕಿಯೋದ 25 ವರ್ಷದ ಮಹಿಳೆಯೊಬ್ಬರನ್ನು ಅಲ್ಲಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಶಶಿಮಿ ಎಂಬ ಜಪಾನೀಸ್‌ ಖಾದ್ಯವೊಂದನ್ನು ಸೇವಿಸಿದ ಬೆನ್ನಿಗೇ ಆಕೆಗೆ ಈ ರೀತಿ ಆಗಿದೆ. ಈ ಖಾದ್ಯದಲ್ಲಿ ಹಸಿ ಮೀನನ್ನು ಸಣ್ಣ ಸ್ಲೈಸ್‌ಗಳನ್ನಾಗಿ ಕತ್ತರಿಸಿ ಸೋಯಾ ಸಾಸ್‌ನೊಂದಿಗೆ ಉಣಬಡಿಸಲಾಗುತ್ತದೆ.

ಆ ಮೀನಿನಲ್ಲಿದ್ದ ರೌಂಡ್‌ವರ್ಮ್ ಪ್ಯಾರಾಸೈಟ್ ಒಂದು ಆಕೆಯ ಗಂಟಲು ಸೇರಿಕೊಂಡಿದೆ. 3.8 ಸೆಂ.ಮೀ ಉದ್ದದ ಈ ಹುಳುವನ್ನು ವೈದ್ಯರು ಸ್ಕ್ಯಾನಿಂಗ್ ಮಾಡಿ ಪತ್ತೆ ಮಾಡಿದ್ದಾರೆ. ಬಳಿಕ ಆ ಹುಳುವನ್ನು ನಾಜೂಕಾಗಿ ಆಕೆಯ ಗಂಟಲಿನಿಂದ ಹೊರತೆಗೆಯಲಾಗಿದೆ.

ಈ ಪ್ರಕರಣವನ್ನು ಅಮೆರಿಕದ Tropical Medicine and Hygiene ವೃತ್ತ ಪತ್ರಿಕೆಯಲ್ಲಿ ಬಿತ್ತರಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...