ತಲೆಗೆ ಎಣ್ಣೆ ಹಚ್ಚಿದ ನಂತರ ಹೆಚ್ಚು ಕೂದಲು ಉದುರುತ್ತದೆ ಎಂದು ಬಹುತೇಕರು ಹೇಳಿರುವುದನ್ನು ಕೇಳಿರುತ್ತೀರಿ. ಇದು ಏಕೆಂಬ ಪ್ರಶ್ನೆ ನಿಮ್ಮನ್ನೂ ಕಾಡಿರಬೇಕಲ್ಲವೇ?.
ಕೂದಲಿಗೆ ಎಣ್ಣೆ ಹಚ್ಚುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ. ಆದರೆ ಎಣ್ಣೆಯ ಪ್ರಮಾಣ ಹೆಚ್ಚಾದರೆ ನಮ್ಮ ಸ್ಕಾಲ್ಪ್ ನಲ್ಲಿ ಇರುವ ರಂಧ್ರಗಳಿಗೆ ತೊಂದರೆ ಉಂಟಾಗುತ್ತದೆ. ಇದರಿಂದ ಕೂದಲಿನ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ತಲೆಯಲ್ಲಿ ಇರುವ ಮೊಯಿಶ್ಚರೈಸರ್ ಕೂಡ ಕಡಿಮೆಯಾಗುತ್ತದೆ. ಇದರಿಂದ ಕೂದಲುಗಳು ಡ್ರೈ ಆಗಿ ಹೆಚ್ಚು ಪ್ರಮಾಣದಲ್ಲಿ ಉದುರುತ್ತವೆ.
ಹಾಗೆಂದು ಕೂದಲುಗಳಿಗೆ ಎಣ್ಣೆ ಹಚ್ಚಿದ ತಕ್ಷಣ ತೊಳೆದುಕೊಳ್ಳಬಾರದು. ಎಣ್ಣೆ ಹಚ್ಚಿ ಒಂದು ಗಂಟೆಯವರೆಗೆ ಬಿಟ್ಟು ನಂತರ ಸ್ನಾನ ಮಾಡಿ. ಎಣ್ಣೆ ಹಚ್ಚಿದ ತಕ್ಷಣ ನಮ್ಮ ಕೂದಲನ್ನು ಬಾಚಿಕೊಳ್ಳಬಾರದು. ಏಕೆಂದರೆ ಕೂದಲು ದುರ್ಬಲವಾಗಿರುತ್ತವೆ.
ಕೂದಲು ಉದುರುವುದು ಮತ್ತು ಕೂದಲು ಸ್ಪ್ಲಿಟ್ ಆಗುವ ಸಾಧ್ಯತೆ ಇರುತ್ತದೆ. ಅದೇ ರೀತಿ ನಾವು ತಲೆಗೆ ಎಣ್ಣೆ ಹಾಕುವುದರಿಂದ ನೆತ್ತಿಗೆ ಆರಾಮ ಸಿಗುತ್ತದೆ. ಹತ್ತರಿಂದ ಹದಿನೈದು ನಿಮಿಷ ಮಸಾಜ್ ಮಾಡಿಕೊಂಡರೆ ಒಳ್ಳೆಯದು. ಒಂದು ಗಂಟೆ ಮಸಾಜ್ ಮಾಡುವುದರಿಂದ ತಲೆ ಕೂದಲುಗಳು ಉದುರುತ್ತದೆ.