ಬ್ಯಾಂಕ್ ಮಾಜಿ ಉದ್ಯೋಗಿಯ ಮಗ ನಕಲಿ ಬ್ಯಾಂಕ್ ಬ್ರಾಂಚ್ ಆರಂಭಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಕಮಲ್ ಬಾಬು ಎಂಬಾತ ಈ ಕೃತ್ಯದ ಮಾಸ್ಟರ್ ಮೈಂಡ್. ಈತ ನಿರುದ್ಯೋಗಿಯಾಗಿದ್ದು, ಪೋಷಕರು ಬ್ಯಾಂಕ್ ನಿವೃತ್ತ ನೌಕರರಾಗಿದ್ದರು.
ಬಂಧನಕ್ಕೊಳಗಾದ ಇತರ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬ ಮುದ್ರಣಾಲಯ ನಡೆಸುತ್ತಿದ್ದ ವ್ಯಕ್ತಿಯು ಸೇರಿದ್ದಾನೆ. ಮುದ್ರಣಾಲಯದಲ್ಲಿ ಚಲನ್, ರಸೀದಿ, ಸ್ಡ್ಯಾಂಪ್ ಹಾಗೂ ಇತರ ದಾಖಲೆಗಳನ್ನು ಮುದ್ರಿಸಲಾಗಿದೆ.
ಗ್ರಾಹಕರೊಬ್ಬರ ದೂರಿನ ಅನುಸಾರ ಪನ್ರುತಿ ಪ್ರದೇಶದಲ್ಲಿ ಅಸಲಿ ಬ್ಯಾಂಕಿನ ಎರಡು ಶಾಖೆಗಳಿದ್ದು, ಮೂರನೆಯದು ಅಲ್ಲಿ ಇಲ್ಲ ಎಂಬುದರ ಆಧಾರದ ಮೇಲೆ ದಾಳಿ ನಡೆಸಿದಾಗ ಪ್ರಕರಣ ಬಯಲಾಗಿದೆ. ಎಸ್.ಬಿ.ಐ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಮತ್ತು ಮೂಲಸೌಕರ್ಯಗಳನ್ನು ನೋಡಿ ಆಶ್ಚರ್ಯಚಕಿತರಾದರು ಎಂದು ತಿಳಿದುಬಂದಿದೆ. ಮೂರು ತಿಂಗಳ ಹಿಂದಷ್ಟೇ ಈ ಶಾಖೆ ಕಾರ್ಯಾರಂಭ ಮಾಡಿತ್ತು.