ದೇಶದಲ್ಲಿ ಕೊರೊನಾ ಸಾವಿನ ಸಂಖ್ಯೆ ಹೆಚ್ಚಾಗ್ತಿದೆ. ಈ ಮಧ್ಯೆ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದೇಶದ ಎಲ್ಲಾ ನಗರಗಳಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದೆ. ಕಳೆದ ಕೆಲವು ವಾರಗಳಿಂದ ಟೊಮೆಟೊ ಬೆಲೆ ಸ್ಥಿರವಾಗಿ ಏರುತ್ತಿವೆ. ಟೊಮೆಟೊ ಬೆಲೆ ಕೆ.ಜಿ.ಗೆ 60-70 ರೂಪಾಯಿಯಾಗಿದೆ.
ಈ ಋತುವಿನಲ್ಲಿ ಟೊಮೆಟೊ ಹಾಳಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಬೆಲೆ ಏರಿಕೆಯಾಗಿದೆ ಎನ್ನಲಾಗ್ತಿದೆ. ಜುಲೈನಿಂದ ಸೆಪ್ಟೆಂಬರ್ ಅವಧಿಯಲ್ಲಿ ಟೊಮೆಟೊಗಳ ಬೆಲೆ ಸಾಮಾನ್ಯವಾಗಿರುತ್ತದೆ. ಟೊಮೆಟೊ ಪೂರೈಕೆ ಸುಧಾರಿಸಿದ ನಂತರ ಬೆಲೆಗಳು ಸಹಜ ಸ್ಥಿತಿಗೆ ಬರುತ್ತವೆ. ಒಂದು ತಿಂಗಳ ಹಿಂದೆ ಅದು ಕೆ.ಜಿ.ಗೆ ಸುಮಾರು 20 ರೂಪಾಯಿಗೆ ಮಾರಾಟವಾಗುತ್ತಿತ್ತು.
ಚೆನ್ನೈ ಹೊರತುಪಡಿಸಿ ಟೊಮೊಟೊ ಬೆಲೆ ಕೆ.ಜಿಗೆ 70-80 ರೂಪಾಯಿಗೆ ಮಾರಾಟವಾಗ್ತಿದೆ. ಬೆಂಗಳೂರಿನಲ್ಲಿ ಒಂದು ಕಿಲೋ ಟೊಮೆಟೊ ಬೆಲೆ 46 ರೂಪಾಯಿಯಾಗಿದೆ.