ತೀರಾ ಆವಸಾನದತ್ತ ಕಾಲಿಟ್ಟಿದ್ದ ನೈಜೀರಿಯಾದ ಕ್ರಾಸ್ ರಿವರ್ ಗೊರಿಲ್ಲಾಗಳ ಗುಂಪೊಂದು ಪುಟ್ಟ ಮರಿಗಳೊಂದಿಗೆ ಇಲ್ಲಿನ ಎಂಬೆ ಬೆಟ್ಟದ ಬಳಿ ಕಾಣಿಸಿಕೊಂಡಿದ್ದು, ಈ ಜೀವಿಗಳ ಉಳಿವಿನ ಬಗ್ಗೆ ಆಶಾಭಾವನೆ ಮೂಡಿದೆ.
ನೈಜೀರಿಯಾ ಹಾಗೂ ಕೆಮರೂನ್ ಪ್ರದೇಶದಲ್ಲಿರುವ ಈ ಎಂಬೆ ಪರ್ವತ ಶ್ರೇಣಿಗಳಲ್ಲಿ ಕೇವಲ 300ರಷ್ಟು ಕ್ರಾಸ್ ರಿವರ್ ಗೊರಿಲ್ಲಾಗಳು ಉಳಿದುಕೊಂಡಿವೆ ಎಂಬ ಆತಂಕಕಾರಿ ಸಂಗತಿಯೊಂದನ್ನು Wildlife Conservation Society ತಿಳಿಸಿತ್ತು.
ನ್ಯೂಯಾರ್ಕ್ ಸಿಟಿ ವಿವಿಯಲ್ಲಿ ಪ್ರಾಧ್ಯಾಪಕರಾದ ಜಾನ್ ಓಟ್ಸ್ ಈ ಜೀವಿಗಳ ಉಳಿವಿಗೆ ಕಳೆದ 20 ವರ್ಷಗಳಿಂದ ನಿರಂತರ ಶ್ರಮಿಸುತ್ತಾ ಬಂದಿದ್ದಾರೆ. ಕ್ಯಾಮೆರಾ ಟ್ರಾಪ್ನಲ್ಲಿ ಈ ಚಿಂಪಾಜಿಗಳ ಸಮೂಹ ಕಂಡು ಬಂದಿರುವುದು ಅವರಿಗೆ ಬಹಳ ಸಂತಸ ಮೂಡಿಸಿದೆ. ಈ ಗೊರಿಲ್ಲಾಗಳ ಸಂರಕ್ಷಣೆಗೆಂದು ಆ ಬೆಟ್ಟದ ಸುತ್ತಲಿನ ನಿವಾಸಿಗಳನ್ನು ಆರಿಸಿ ಈಕೋ ಗಾರ್ಡ್ಗಳ ತಂಡವನ್ನು ಕಟ್ಟಲಾಗಿದೆ.