ಮಾಯಾನಗರಿ ಮುಂಬಯಿಯಲ್ಲಿ ಬದುಕು ಅದೆಷ್ಟರ ಮಟ್ಟಿಗೆ ಇರುತ್ತದೆ ಎಂಬ ರಿಯಲಿಸ್ಟಿಕ್ ಫೀಲ್ ಅನ್ನು ಕಟ್ಟಿಕೊಡುವ ಕೆಲವೊಂದಷ್ಟು ಸಿನೆಮಾಗಳು ಬಂದು ಹೋಗಿವೆ. ಆದರೆ, ಜುಲೈ 1998ರಲ್ಲಿ ಬಿಡುಗಡೆಯಾದ ʼಸತ್ಯಾʼ ಚಿತ್ರ ಈ ಪಟ್ಟಿಯಲ್ಲಿ ಅದ್ವಿತೀಯವಾದದ್ದು ಎಂದರೆ ಅತಿಶಯೋಕ್ತಿ ಅಲ್ಲ.
ಪ್ರತಿಭಾವಂತ ನಟ ಮನೋಜ್ ಬಾಜ್ಪೇಯಿಗೆ ಬಾಲಿವುಡ್ ಗೆ ದೊಡ್ಡದೊಂದು ಪಾದಾರ್ಪಣೆ ಮಾಡಲು ಅನುವು ಮಾಡಿಕೊಟ್ಟ ಈ ಚಿತ್ರಕ್ಕೆ ಆಗ 23 ವರ್ಷದವರಾಗಿದ್ದ ಅನುರಾಗ್ ಕಶ್ಯಪ್ ಕಥೆ ಬರೆದಿದ್ದರು. ಆರಂಭದಲ್ಲಿ ಈ ಚಿತ್ರವನ್ನು ಫ್ಲಾಪ್ ಎಂದು ಘೋಷಿಸಲಾಗಿತ್ತು. ಆದರೆ ನೋಡನೋಡುತ್ತಲೇ 25 ವಾರಗಳ ಕಾಲ ಓಡಿದ್ದ ಈ ಸಿನೆಮಾ ಸೂಪರ್ ಹಿಟ್ ಆಗಿಬಿಟ್ಟಿತ್ತು.
ಈ ಕಲ್ಟ್ ಸಿನೆಮಾವನ್ನು ರಾಮ್ ಗೋಪಾಲ್ ವರ್ಮಾ ನಿರ್ದೇಶಿಸಿದ್ದಾರೆ. ಜುಲೈ 3,1998ರ ಆ ಘಳಿಗೆಯನ್ನು ನೆನೆದ ಬಾಜ್ಪೇಯಿ, ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸವಿ ನೆನಪನ್ನು ಹಂಚಿಕೊಂಡಿದ್ದಾರೆ.
https://www.instagram.com/p/CCKg8q-HGhN/?utm_source=ig_embed