alex Certify 22 ವರ್ಷದ ಹಿಂದೆ ರಿಲೀಸ್‌ ಆದ ’ಸತ್ಯಾ’ ಚಿತ್ರದ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

22 ವರ್ಷದ ಹಿಂದೆ ರಿಲೀಸ್‌ ಆದ ’ಸತ್ಯಾ’ ಚಿತ್ರದ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಮಾಯಾನಗರಿ ಮುಂಬಯಿಯಲ್ಲಿ ಬದುಕು ಅದೆಷ್ಟರ ಮಟ್ಟಿಗೆ ಇರುತ್ತದೆ ಎಂಬ ರಿಯಲಿಸ್ಟಿಕ್ ಫೀಲ್ ‌ಅನ್ನು ಕಟ್ಟಿಕೊಡುವ ಕೆಲವೊಂದಷ್ಟು ಸಿನೆಮಾಗಳು ಬಂದು ಹೋಗಿವೆ. ಆದರೆ, ಜುಲೈ 1998ರಲ್ಲಿ ಬಿಡುಗಡೆಯಾದ ʼಸತ್ಯಾʼ ಚಿತ್ರ ಈ ಪಟ್ಟಿಯಲ್ಲಿ ಅದ್ವಿತೀಯವಾದದ್ದು ಎಂದರೆ ಅತಿಶಯೋಕ್ತಿ ಅಲ್ಲ.

ಪ್ರತಿಭಾವಂತ ನಟ ಮನೋಜ್ ಬಾಜ್ಪೇಯಿಗೆ ಬಾಲಿವುಡ್ ‌ಗೆ ದೊಡ್ಡದೊಂದು ಪಾದಾರ್ಪಣೆ ಮಾಡಲು ಅನುವು ಮಾಡಿಕೊಟ್ಟ ಈ ಚಿತ್ರಕ್ಕೆ ಆಗ 23 ವರ್ಷದವರಾಗಿದ್ದ ಅನುರಾಗ್ ಕಶ್ಯಪ್ ಕಥೆ ಬರೆದಿದ್ದರು. ಆರಂಭದಲ್ಲಿ ಈ ಚಿತ್ರವನ್ನು ಫ್ಲಾಪ್ ಎಂದು ಘೋಷಿಸಲಾಗಿತ್ತು. ಆದರೆ ನೋಡನೋಡುತ್ತಲೇ 25 ವಾರಗಳ ಕಾಲ ಓಡಿದ್ದ ಈ ಸಿನೆಮಾ ಸೂಪರ್‌ ಹಿಟ್ ಆಗಿಬಿಟ್ಟಿತ್ತು.

ಈ ಕಲ್ಟ್‌ ಸಿನೆಮಾವನ್ನು ರಾಮ್ ಗೋಪಾಲ್ ವರ್ಮಾ ನಿರ್ದೇಶಿಸಿದ್ದಾರೆ. ಜುಲೈ 3,1998ರ ಆ ಘಳಿಗೆಯನ್ನು ನೆನೆದ ಬಾಜ್ಪೇಯಿ, ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸವಿ ನೆನಪನ್ನು ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...